ಚುಟು ಚುಟು ಅಂತೈತಿ ಹಾಡು ಯೂಟ್ಯೂಬ್ಗೆ ಎಂಟ್ರಿ ಕೊಟ್ಟು ವರ್ಷವಾಯ್ತು. ಶರಣ್-ಅಶಿಕಾ ರಂಗನಾಥ್ ಜೋಡಿ, ಆ ಜೋಡಿಯ ಕುಣಿತ, ಅರ್ಜುನ್ ಜನ್ಯಾ ಮ್ಯೂಸಿಕ್ಕು, ರವೀಂದ್ರ ಸೊರ್ಗಾವಿ, ಶಮಿತಾ ಮಲ್ನಾಡ್ ಕಂಠ, ಶಿವು ಬೆರಗಿ ಸಾಹಿತ್ಯ.. ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿ, ಚಿತ್ರವೂ ಹಿಟ್ ಆಗಿರುವಾಗಲೇ.. ಚುಟು ಚುಟು ಹಾಡು ಯೂಟ್ಯೂಬ್ನಲ್ಲಿ ದಾಖಲೆಯನ್ನೇ ಬರೆದುಬಿಟ್ಟಿದೆ. ಚುಟು ಚುಟು ಹಾಡು, ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಿಸಿದ ಹಾಡು ಎಂಬ ದಾಖಲೆ ಬರೆದಿದೆ.
ಈ ಮೊದಲು ಈ ದಾಖಲೆ ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ ಹಾಡಿಗಿತ್ತು. ಆ ಹಾಡನ್ನು ಏಳೂವರೆ ಕೋಟಿಗೂ ಹೆಚ್ಚು ಜನ ನೋಡಿದ್ದರು. ಅದನ್ನೂ ಮೀರಿ ಈಗಲೂ ರನ್ನಿಂಗ್ನಲ್ಲಿದೆ ಚುಟು ಚುಟು ಹಾಡು.