ಟಗರು ಚಿತ್ರದಲ್ಲಿ ಪ್ರೇಮಿಗಳಾಗಿ ಮೋಡಿ ಮಾಡಿದ್ದ ಜೋಡಿ ಶಿವಣ್ಣ ಮತ್ತು ಭಾವನಾ. ಇಬ್ಬರೂ ಮತ್ತೊಮ್ಮೆ ಜೋಡಿಯಾಗುತ್ತಿದ್ದಾರೆ. ಜೋಡಿಯಾಗಿಸುತ್ತಿರುವುದು ಹರ್ಷ. ಮೈ ನೇಮ್ ಈಸ್ ಅಂಜಿ ಚಿತ್ರಕ್ಕೆ. ಜಯಣ್ಣ ನಿರ್ಮಾಣದ ಚಿತ್ರಕ್ಕೆ ಜಾಕಿ ಭಾವನಾ ಬಹುತೇಕ ಫೈನಲ್ ಆಗಿದ್ದಾರೆ.
ಈ ಚಿತ್ರಕ್ಕೆ ಕಬಾಲಿ ಖ್ಯಾತಿಯ ಧನ್ಸಿಕಾ, ಜೋಗಿ ಖ್ಯಾತಿಯ ಜೆನ್ನಿಫರ್ ಕೊತ್ವಾಲ್ ಹೆಸರೂ ಕೂಡಾ ಚರ್ಚೆಯಾಗಿತ್ತು. ಫೈನಲಿ ಹರ್ಷ ಜಾಕಿ ಭಾವನಾ ಅವರನ್ನು ಓಕೆ ಮಾಡಿದ್ದಾರೆ. ಜಯಣ್ಣ ಒಬ್ಬರು ಓಕೆ ಓಕೆ ಎನ್ನೋದು ಬಾಕಿಯಿದೆಯಂತೆ.