` ಮಂಡ್ಯ ಪ್ರಚಾರ ಮುಗಿದ ಮಾರನೇ ದಿನವೇ ದರ್ಶನ್ ಹೊಸ ಸಿನಿಮಾ ಶುರು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan will be busy with robert after elections
Robert

ಚಾಲೆಂಜಿಂಗ್ ಸ್ಟಾರ್ ದರ್ಶನ್, ಹೆಬ್ಬುಲಿ ಉಮಾಪತಿ, ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ ರಾಬರ್ಟ್ ಸಿನಿಮಾ ರೆಡಿಯಾಗುತ್ತಿರುವುದು ಗೊತ್ತಿದೆ ತಾನೇ. ಚಿತ್ರದ ಫಸ್ಟ್ ಲುಕ್ ಹೊರಬಿಟ್ಟಿದ್ದ ಚಿತ್ರತಂಡ, ಈಗ ಚಿತ್ರದ ಶೂಟಿಂಗ್ ಪ್ಲಾನ್‍ನ್ನೂ ಮಾಡಿಕೊಂಡಿದೆ. ಏಪ್ರಿಲ್ 19ರಿಂದ ರಾಬರ್ಟ್ ಚಿತ್ರದ ಶೂಟಿಂಗ್ ಶುರುವಾಗಲಿದೆ.

ಏಪ್ರಿಲ್ 18ಕ್ಕೆ ಮಂಡ್ಯದಲ್ಲಿ ಮತದಾನ. ಮತದಾನ ಮುಗಿದ ಮಾರನೇ ದಿನ ರಾಬರ್ಟ್ ಶುರು. ಅದಕ್ಕೂ ಮೊದಲು ಏಪ್ರಿಲ್‍ನಲ್ಲಿಯೇ ಅದ್ಧೂರಿ ಮುಹೂರ್ತಕ್ಕೂ ಸಿದ್ಧತೆ ಮಾಡಿದ್ದಾರೆ ಉಮಾಪತಿ. ರಾಬರ್ಟ್ ಟೇಕಾಫ್ ಆಗುವ ಹೊತ್ತಿಗೆ, ಒಡೆಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿರುತ್ತೆ.