ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ ಯುವರತ್ನ. ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಕಾಲೇಜು ಹುಡುಗನ ಗೆಟಪ್ಪಲ್ಲಿ ಪುನೀತ್ ಯಂಗ್ ಆಗಿ ಕಾಣುತ್ತಿದ್ದಾರೆ. ಇದೆಲ್ಲದರ ಜೊತೆಗೆ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿರುವುದು ಪುನೀತ್ ಬೈಕ್ ನಂಬರ್.
ಬೈಕ್ ನಂಬರ್ : KA 01 PS 0029
KA 01 ಎಂದರೆ ಕರ್ನಾಟಕ ನಂ.1 ಸ್ಟಾರ್.
PS ಅಂದ್ರೆ ಪವರ್ ಸ್ಟಾರ್ ಅಂತೆ. ಇನ್ನು 0029 ಅಂದ್ರೆ, ಅಪ್ಪು ಅಭಿನಯದ 29ನೇ ಸಿನಿಮಾ.
ನಂಬರ್ ಪ್ಲೇಟ್ ಅರ್ಥ ಗೊತ್ತಾಗಿದ್ದೇ ತಡ.. ಅಪ್ಪು ಫ್ಯಾನ್ಸ್ ಓಪನ್ ದ ಬಾಟಲ್..ಟಲ್..ಟಲ್.. ಎನ್ನುತ್ತಿದ್ದಾರೆ.