ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟಿಸಿರುವ, ರಾಜಾಹುಲಿ ಖ್ಯಾತಿಯ ಗುರುದೇಶಪಾಂಡೆ ನಿರ್ದೇಶನದ ಚಿತ್ರ ಪಡ್ಡೆಹುಲಿ. ರವಿಚಂದ್ರನ್, ಸುಧಾರಾಣಿ, ರಕ್ಷಿತ್ ಶೆಟ್ಟಿ ಕೂಡಾ ನಟಿಸಿರುವ ಚಿತ್ರದ ಒಂದೊಂದೇ ಹಾಡುಗಳು ಹೊರಬೀಳುತ್ತಿವೆ. ಈಗ ಚಿತ್ರದ ಚಿಂದಿ ಹಾಡೊಂದು ವಿಡಿಯೋ ಸಮೇತ ರಿಲೀಸ್ ಆಗಿದೆ.
ಚೂರ್ ಚೂರಾಗಿದೆ.. ಅನ್ನೋ ಟಪ್ಪಾಂಗುಚ್ಚಿ ಸಾಂಗ್ಗೆ ಮೈನವಿರೇಳಿಸುವಂತೆ ಕುಣಿದಿರೋದು ಶ್ರೇಯಸ್ ಮತ್ತು ನಿಶ್ವಿಕಾ ನಾಯ್ಡು. ಪುನೀತ್ ಆರ್ಯ ಸಾಹಿತ್ಯ ಇರುವ ಹಾಡಿಗೆ ಅಜನೀಶ್ ಲೋಕನಾಥ್ ಕಿಕ್ಕೇರಿಸುವ ಮ್ಯೂಸಿಕ್ ಕೊಟ್ಟಿದ್ದಾರೆ.