` ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ಎಫ್‍ಐಆರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
fir against vijaylakshmi
Raviprakash, FIR Copy

ನಾಗಮಂಡಲ ವಿಜಯಲಕ್ಷ್ಮಿ ಮತ್ತು ಅವರ ಸೋದರಿ ಉಷಾ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ತಾನು ವಿಜಯಲಕ್ಷ್ಮಿ ಅವರಿಗೆ ಫೆ.27ರಂದು 1 ಲಕ್ಷ ರೂ. ಹಣ ನೀಡಿದ್ದು, ಅದಾದ ನಂತರ ಅವರು ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ನಟ ರವಿಪ್ರಕಾಶ್ ದೂರು ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ, ಸಹಾಯಕ್ಕಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರವಿಪ್ರಕಾಶ್ 1 ಲಕ್ಷ ರೂ. ನೀಡಿದ್ದರು. ಆದರೆ, ಅದಾದ ನಂತರ ರವಿಪ್ರಕಾಶ್ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ದೂರು ನೀಡಿದ್ದರು.