` ಮಂಡ್ಯದ ನಡುವೆಯೂ ಒಡೆಯನ ಮರೆತಿಲ್ಲ ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan did not miss odeya shooting amidst mandya election campaigning
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಗೆಲುವಿಗೆ ಟೊಂಕ ಕಟ್ಟಿದ್ದಾರೆ. ಇನ್ನು ಏಪ್ರಿಲ್ 18ರವರೆಗೆ ನಮ್ಮ ಪರೇಡ್ ಮಂಡ್ಯದಲ್ಲಿ ಎಂದಿದ್ದ ದರ್ಶನ್, ಸಿನಿಮಾಗಳಿಗೆ ಬ್ರೇಕ್ ಕೊಡ್ತಾರೆ ಎಂದು ಭಾವಿಸಲಾಗಿತ್ತು. ಹಾಗೇನೂ ಆಗಿಲ್ಲ. ಒಂದು ಕಡೆ ಪ್ರಚಾರ ಮಾಡುತ್ತಲೇ, ಹಳೆಯ ಕಮಿಟ್‍ಮೆಂಟ್ ಆಗಿದ್ದ ಒಡೆಯ ಚಿತ್ರದ ಶೂಟಿಂಗ್‍ನ್ನೂ ಮುಂದುವರಿಸಿದ್ದಾರೆ ದರ್ಶನ್.

ಮೈಸೂರಿನಲ್ಲಿ ಶೂಟಿಂಗ್ ಮುಗಿಸಿ, ಹೈದರಾಬಾದ್‍ಗೆ ತೆರಳಿರುವ ದರ್ಶನ್, ಸಿನಿಮಾ ತಂಡದ ಜೊತೆಯಲ್ಲಿದ್ದಾರೆ.

ಎಂ.ಡಿ.ಶ್ರೀಧರ್ ನಿರ್ದೇಶನದ ಚಿತ್ರದಲ್ಲಿ, ಕೊಡಗಿನ ಚೆಲುವೆ ರಾಘವಿ ನಾಯಕಿ. ತಾರಕ್, ಯಜಮಾನ ಚಿತ್ರದಂತೆ, ಈ ಚಿತ್ರದಲ್ಲೂ ದೇವರಾಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಎಸ್.ನಾರಾಯಣ್ ಪುತ್ರ ಪಂಕಜ್, ದರ್ಶನ್ ತಮ್ಮಂದಿರಲ್ಲಿ ಒಬ್ಬನಾಗಿ ನಟಿಸಿದ್ದಾರೆ. 

Dr Rajkumar Gallery

Rightbanner02_butterfly_inside

Paddehuli Movie Gallery