` ರಣಗಿರಿ ರಹಸ್ಯ ಬೇಟೆಗೆ ಡಿಟೆಕ್ಟಿವ್ ರಮೇಶ್ ಅರವಿಂದ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramesh aravind to play detective in his next
Ramesh Aravind

ರಮೇಶ್ ಅರವಿಂದ್ ಡಿಟೆಕ್ಟಿವ್ ಆಗುತ್ತಿದ್ದಾರೆ. ಕನ್ನಡದಲ್ಲೀಗ ಪತ್ತೇದಾರನಾಗುವ ಹೊಸ ಟ್ರೆಂಡ್ ಶುರುವಾಗಿದೆ. ಅವರ ಚಿತ್ರದ ಹೆಸರೇ ಶಿವಾಜಿ ಸುರತ್ಕಲ್ - ದಿ ಕೇಸ್ ಆಪ್ ರಣಗಿರಿ ರಹಸ್ಯ. ರಮೇಶ್ ಅರವಿಂದ್ ಚಿತ್ರದಲ್ಲಿ ಶೆರ್ಲಾಕ್ ಹೋಮ್ಸ್ ಮಾದರಿಯ ಪತ್ತೇದಾರ.

ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರಕ್ಕೆ ರಾಧಿಕಾ ಚೇತನ್, ಆರೋಹಿ ನಾರಾಯಣ್ ನಾಯಕಿಯರು. ರಣಗಿರಿ ಅನ್ನೋ ಊರಿನ ಹೆಸರು ಕೇಳಿದರೇನೇ ಎಲ್ಲರೂ ನಡುಗುತ್ತಾರೆ. ಕಾರಣ, ಅಲ್ಲಿ ನಡೆಯೋ ಕ್ರೈಂಗಳು. ಅ ನಿಗೂಢದ ಹುಡುಕಾಟಕ್ಕೆ ಸ್ಪೆಷಲ್ ಪತ್ತೇದಾರ ಶಿವಾಜಿ ಸುರತ್ಕಲ್ ಹೊರಡುತ್ತಾನೆ. ವಿಚಿತ್ರ ಕೇಸ್ ರಹಸ್ಯ ಬೇಧಿಸುತ್ತಾನೆ ಎಂದು ವಿವರ ಕೊಡ್ತಾರೆ ಆಕಾಶ್ ಶ್ರೀವತ್ಸ. ಚಿತ್ರ ಈಗಾಗಲೇ 10 ದಿನದ ಶೂಟಿಂಗ್ ಮುಗಿಸಿದೆಯಂತೆ.

Dr Rajkumar Gallery

Rightbanner02_butterfly_inside

Paddehuli Movie Gallery