` ಲಂಬೋದರನ ಸುಂದರಿಗೆ ಡಬಲ್ ಸಂಭ್ರಮ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shruthi prakash excited for her debut
Shruthi Prakash

ತೆರೆಗೆ ಬರಲು ತುದಿಗಾಲಲ್ಲಿ ನಿಂತಿರುವ ಲಂಡನ್‍ನಲ್ಲಿ ಲಂಬೋದರ ಚಿತ್ರದಲ್ಲಿ ಶೃತಿ ಪ್ರಕಾಶ್ ನಾಯಕಿ. ಬಿಗ್‍ಬಾಸ್‍ನಿಂದ ಕನ್ನಡಿಗರ ಮನೆ ಮಾತಾದ ಹುಡುಗಿ ಶೃತಿ ಪ್ರಕಾಶ್. ಅವರಿಗೀಗ ಡಬಲ್ ಪಾದಾರ್ಪಣೆ ಸಂಭ್ರಮ. ಅರೆ.. ಇದು ಹೇಗೆ ಸಾಧ್ಯ ಅನ್ನಬೇಡಿ.

ಲಂಡನ್‍ನಲ್ಲಿ ಲಂಬೋದರ ಚಿತ್ರದಲ್ಲಿ ರಶ್ಮಿ ಅನ್ನೋ ಹೆಸರಿನ ನಾಯಕಿ ಪಾತ್ರ ಅವರದ್ದು. ಬಬ್ಲಿಯಾಗಿದ್ದರೂ, ಪ್ರತಿಯೊಂದನ್ನೂ ತರ್ಕಬದ್ಧವಾಗಿ ಯೋಚಿಸುವ ಲಾಜಿಕಲ್ ಹುಡುಗಿ. ಜೊತೆಗೆ ಈ ಚಿತ್ರದಲ್ಲಿ ಅವರೊಂದು ಹಾಡನ್ನೂ ಹಾಡಿದ್ದಾರೆ. ಸ್ಸೋ.. ಅವರು ಚಿತ್ರದ ನಾಯಕಿ ಕಮ್ ಗಾಯಕಿ.

ಈ ಚಿತ್ರದಲ್ಲಿ ನಾನು ಬೇರೆಯದ್ದೇ ರೋಲ್ ಮಾಡಿದ್ದೇನೆ. ನನ್ನನ್ನು ಹಿಂದಿ ಸೀರಿಯಲ್ ಹಾಗೂ ಬಿಗ್‍ಬಾಸ್‍ನಲ್ಲಿ ನೋಡಿದವರಿಗೆ ಇಲ್ಲಿ ಕಾಣಿಸಿಕೊಳ್ಳೋ ಶೃತಿ ಬೇರೆ. ನನ್ನ ರಿಯಲ್ ಲೈಫ್‍ಗೆ ಹತ್ತಿರವಾದ ಪಾತ್ರವಿದು. ಜೊತೆಗೆ ಡಬಲ್ ಡೆಬ್ಯೂ. ಇಂತಾದ್ದೊಂದು ಅವಕಾಶ ಕೊಟ್ಟ ರಾಜ್ ಸೂರ್ಯ ಅವರಿಗೆ ಸ್ಪೆಷಲ್ ಸ್ಪೆಷಲ್ ಥ್ಯಾಂಕ್ಸ್ ಎಂದಿದ್ದಾರೆ ಶೃತಿ ಪ್ರಕಾಶ್.

#

I Love You Movie Gallery

Rightbanner02_butterfly_inside

Yaana Movie Gallery