` ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಮಿಸ್ಸಿಂಗ್ ಬಾಯ್ ಜೋಗಿ ಹಾಡು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
missing boy film gets jogi song
Missing Boy

ಜೋಗಿ ಚಿತ್ರದ ಸೂಪರ್ ಹಿಟ್ ಹಾಡು ಬೇಡುವೆನು ವರವನ್ನು ಕೊಡು ತಾಯಿ ಜನ್ಮವನು ಕಡೆತನಕ ಮರೆಯಲ್ಲ ಜೋಗಿ.. ಆ ಹಾಡು ಹಿಟ್ ಅಷ್ಟೇ ಅಲ್ಲ, ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡುವ ಶಕ್ತಿ ಆ ಹಾಡು ಮತ್ತು ಸಾಹಿತ್ಯಕ್ಕಿದೆ. ಹಾಡಿನ ಆ ತುಣುಕನ್ನು ಮಿಸ್ಸಿಂಗ್ ಬಾಯ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ತಂದೆ-ತಾಯಿಯಿದ್ದರೂ ಅನಾಥನಾಗುವ ಹುಡುಗ, ದೊಡ್ಡವನಾದ ಮೇಲೆ ಹಳೆಯ ನೆನಪುಗಳನ್ನು ಬೆನ್ನತ್ತಿಕೊಂಡು ಹೆತ್ತವರನ್ನು ಹುಡುಕುವುದೇ ಚಿತ್ರದ ಕತೆ. 

ಚಿತ್ರದ ಕಥೆಗೆ ಹೇಳಿ ಮಾಡಿಸಿದಂತಿರುವ ಹಾಡನ್ನು ನಿರ್ದೇಶಕ ರಘುರಾಮ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಚಿತ್ರದ ತೀವ್ರತೆಯನ್ನು ಈ ಹಾಡು ಇನ್ನಷ್ಟು ಹೆಚ್ಚಿಸುತ್ತೆ. ಚಿತ್ರದ ಬಗ್ಗೆ ಅಪಾರ ಮೆಚ್ಚುಗೆಯ ಮಾತು ಕೇಳಿಬರುತ್ತಿವೆ. ಈ ಮಾತುಗಳು ರಘುರಾಮ್, ಕೊಲ್ಲ ಪ್ರವೀಣ್ ಅವರಿಗಷ್ಟೇ ಅಲ್ಲ, ಕಿಚ್ಚ ಸುದೀಪ್, ನಿರ್ದೇಶಕ ಸಂತೋಷ್ ಆನಂದ್‍ರಾಮ್, ಕಾರ್ತಿಕ್ ಗೌಡ ಮೊದಲಾದವರಿಗೆಲ್ಲ ಖುಷಿ ಕೊಟ್ಟಿದೆ.