ತೆಲುಗಿನ ಯಾವುದೇ ಸ್ಟಾರ್ ನಟರ ಚಿತ್ರ ನೋಡಿದರೂ, ಇತ್ತೀಚೆಗೆ ಅಲ್ಲಿ ಕನ್ನಡಿಗರಿಗೆ ಚಿರಪರಿಚಿತವಾಗಿರುವ ಪವಿತ್ರಾ ಲೋಕೇಶ್ ಇದ್ದೇ ಇರ್ತಾರೆ. ಇತ್ತೀಚೆಗೆ ಪವಿತ್ರಾ ಲೋಕೇಶ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇದೀಗ ಅವರು ಸದ್ಗುಣ ಸಂಪನ್ನ ಮಾಧವ ಚಿತ್ರದಲ್ಲಿ ರವಿಶಂಕರ್ ಪತ್ನಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪವಿತ್ರಾ ಲೋಕೇಶ್ ಅವರಿಗೆ ಈ ಪ್ರಶ್ನೆ ಎದುರಾಯ್ತು. ಇದಕ್ಕೆ ಪವಿತ್ರಾ ಲೋಕೇಶ್ ಕೊಟ್ಟ ಉತ್ತರ ನೇರವಾಗಿತ್ತು.
ನನಗೂ ಆಸೆ ಇದೆ. ಕನ್ನಡದಲ್ಲಿ ಅಭಿನಯಿಸಿ ತುಂಬಾ ಕಾಲವಾಯ್ತು. ಆದರೆ ಕನ್ನಡದಿಂದ ದೂರವೇನೂ ಆಗಿಲ್ಲ. ಪೊಗರು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸದ್ಗುಣ ಸಂಪನ್ನ ಮಾಧವ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ, ತೆಲುಗಿನಲ್ಲಿ ಬ್ಯುಸಿ. ಅಲ್ಲಿ ಬ್ಯುಸಿ ಎಂಬ ಕಾರಣಕ್ಕೋ ಏನೋ, ಇಲ್ಲಿ ಅವಕಾಶಗಳು ಸಿಗುತ್ತಿಲ್ಲ. ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದಿದ್ದಾರೆ ಪವಿತ್ರಾ ಲೋಕೇಶ್.