` ಫಣಿಯಮ್ಮ ಖ್ಯಾತಿಯ ಎಲ್.ವಿ. ಶಾರದಾ ಇನ್ನಿಲ್ಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
lv sharadha no more
LV Sharadha

ಫಣಿಯಮ್ಮ, ವಂಶವೃಕ್ಷ, ಭೂತಯ್ಯನ ಮಗ ಅಯ್ಯು, ಮಧ್ವಾಚಾರ್ಯ, ನಕ್ಕಳಾ ರಾಜಕುಮಾರಿ, ಆದಿಶಂಕರಾಚಾರ್ಯ, ಹೇಮಾವತಿ, ಮೈತ್ರಿ.. ಹೀಗೆ ಎಲ್.ವಿ. ಶಾರದಾ ಅಭಿನಯಿಸಿದ  ಚಿತ್ರಗಳು ಬೆರಳೆಣಿಕೆಯಷ್ಟು. ವಿಶೇಷವೆಂದರೆ, ಈ ಯಾವ ಚಿತ್ರಗಳೂ ಕಮರ್ಷಿಯಲ್ ಚಿತ್ರಗಳಲ್ಲ. ಪ್ರಯೋಗಾತ್ಮಕ ಕಲಾತ್ಮಕ ಚಿತ್ರಗಳೇ. ಇಂತಹ ವಿಭಿನ್ನ ಚಿತ್ರಗಳ ಮೂಲಕವೇ ಕನ್ನಡಿಗರಿಗೆ ಪರಿಚಿತರಾಗಿದ್ದ ನಟಿ ಎಲ್. ಶಾರದಾ. ತಮ್ಮ 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಾರದಾ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಇತ್ತು. ಕಮರ್ಷಿಯಲ್ ಸಿನಿಮಾಗಳಲ್ಲಿ ಅವಕಾಶವಿದ್ದರೂ, ತೊಡಗಿಸಿಕೊಳ್ಳದೇ ಇದ್ದ ಶಾರದಾ, ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದರು.

ವಂಶವೃಕ್ಷ ಮೊದಲ ಸಿನಿಮಾ. ಆ ಚಿತ್ರಕ್ಕೆ ರಾಜ್ಯ ಸರ್ಕಾರದ ಶ್ರೇಷ್ಟ ನಟಿ ಪ್ರಶಸ್ತಿ ಪಡೆದರು. ಫಣಿಯಮ್ಮ ಚಿತ್ರದ ಪಾತ್ರವಂತೂ ಮನೆಮಾತಾಗಿ ಹೋಯ್ತು. ವಾತ್ಸಲ್ಯ ಪಥ ಚಿತ್ರದ ನಟನೆಗೆ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿ ಪಡೆದಿದ್ದರು.

ಫಣಿಯಮ್ಮ ಚಿತ್ರದಲ್ಲಿ ಆಗಿನ ಕಾಲಕ್ಕೇ ತಲೆ ಬೋಳಿಸಿಕೊಂಡು ನಟಿಸಿದ್ದರು ಎಲ್.ವಿ.ಶಾರದಾ. ಈಗ ಯಾವುದಾದರೂ ನಟಿ ಹಾಗೆ ಮಾಡಿದರೆ ಅದು ದೊಡ್ಡ ಸುದ್ದಿ. ಆದರೆ.. ಆಗಿನ ಕಾಲದಲ್ಲಿ.. ಅದು ನಿಜಕ್ಕೂ ಕ್ರಾಂತಿಯೇ ಆಗಿತ್ತು. ಎಲ್.ವಿ.ಶಾರದಾ ಅವರ ಡೆಡಿಕೇಷನ್‍ಗೆ ಇದೊಂದು ಉದಾಹರಣೆ ಸಾಕು.

I Love You Movie Gallery

Rightbanner02_butterfly_inside

One Way Movie Gallery