` ಮೊದಲ ಸಕ್ಸಸ್‍ಗೆ 17 ವರ್ಷ ಕಾಯ್ದೆ - ವಿನೋದ್ ಪ್ರಭಾಕರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
vinod prabhakar reveals 17 years of struggle
Vinod Prabhakar

ವಿನೋದ್ ಪ್ರಭಾಕರ್ ಎಂದರೆ ಥಟ್ಟನೆ ಮೊದಲು ಕಣ್ಮುಂದೆ ಬರೋದೇ ಟೈಗರ್ ಪ್ರಭಾಕರ್. ಅಪ್ಪನ ಹೆಸರು, ಅಭಿಮಾನಿ ಬಳಗ ಎಲ್ಲ ಇದ್ದರೂ, ವಿನೋದ್ ಪ್ರಭಾಕರ್‍ಗೆ ಗೆಲುವು ಸುಲಭವಾಗಿ ಸಿಕ್ಕಲಿಲ್ಲ. ಅದು ಸಿಕ್ಕಿದ್ದು 17 ವರ್ಷಗಳ ಬಳಿಕ.

ಅಪ್ಪ ಈ ಇಂಡಸ್ಟ್ರಿಗೆ ಬರಬೇಡ ಎನ್ನುತ್ತಿದ್ದರು. ಆದರೂ ಬಂದೆ. ಕಷ್ಟಪಟ್ಟೆ. ಮೊದಲ ಗೆಲುವು ಸಿಕ್ಕಿದ್ದು 17 ವರ್ಷಗಳ ನಂತರ. ಇದನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ' ಎಂದಿದ್ದಾರೆ ವಿನೋದ್.

ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರ ತೆರೆಗೆ ಸಿದ್ಧವಾಗಿದೆ. ಅರುಣ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ಮಹೇಶ್ ಗೌಡ ನಿರ್ದೇಶಕ. ಶ್ರದ್ಧಾಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಸಿನಿಮಾ ಚೆನ್ನಾಗಿ ಬಂದಿದೆ. ಇನ್ನು ಹರಸುವುದು ಪ್ರೇಕ್ಷಕರಿಗೆ ಬಿಟ್ಟಿದ್ದು ಎಂದಿದ್ದಾರೆ ವಿನೋದ್ ಪ್ರಭಾಕರ್.

Trayambakam Movie Gallery

Rightbanner02_butterfly_inside

Paddehuli Movie Gallery