` ಮಂಡ್ಯ ಸ್ಟಾರ್ ವಾರ್ - ಸುಮಲತಾಗೆ ರೈತ ಸಂಘ ಬೆಂಬಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sumalatha gets massive support from fanfare
Sumalatha Ambareesh's Rally

ಸುಮಲತಾ ಅಂಬರೀಷ್, ನಿಖಿಲ್ ಕುಮಾರಸ್ವಾಮಿ ಮುಖಾಮುಖಿ. ಸುಮಲತಾಗೆ ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್ ಬೆಂಬಲ, ನಿಖಿಲ್ ಬೆನ್ನಹಿಂದೆ ಕುಮಾರಸ್ವಾಮಿ.. ಹೀಗೆ ಮಂಡ್ಯ ಸ್ಟಾರ್ ವಾರ್ ಭಲೇ ಜೋರು. ಸುಮಲತಾ ನಾಮಪತ್ರ ಸಲ್ಲಿಸಿದ್ದಾರೆ. ಬಹಿರಂಗ ಸಮಾವೇಶವನ್ನೂ ಮಾಡಿದ್ದಾರೆ. ನೆರೆದಿದ್ದ ಅಪಾರ ಜನಸ್ತೋಮದ ಎದುರು ಪ್ರೀತಿಯ ಮತ ಕೇಳಿದ್ದಾರೆ. ವಿಶೇಷವೆಂದರೆ ಸುಮಲತಾಗೆ ರೈತ ಸಂಘ ಬೆಂಬಲ ನೀಡಿರುವುದು. ವೇದಿಕೆಯಲ್ಲಿ ಸುಮಲತಾಗೆ ಹಸಿರು ಶಾಲು ಹಾಕುವ ಮೂಲಕ, ರೈತ ಸಂಘ ತನ್ನ ಬೆಂಬಲ ಸುಮಲತಾಗೆ ಎಂದಿದೆ. ಅಷ್ಟೇ ಅಲ್ಲದೆ, ಸುಮಲತಾ ಭಾಗವಹಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಬಾವುಟಗಳು ರಾರಾಜಿಸಿವೆ.

ಸುಮಲತಾ : ನನಗೆ ಬೇರೆ ಬೇರೆ ಕ್ಷೇತ್ರದಿಂದ ಆಫರ್‍ಗಳಿದ್ದವು. ಎಂಎಲ್‍ಸಿ ಆಗುವ ಅವಕಾಶವೂ ಇತ್ತು. ಅಧಿಕಾರದ ಆಸೆಯಿದ್ದರೆ, ಅದನ್ನು ಒಪ್ಪಿಕೊಂಡು ಇರಬಹುದಿತ್ತು. ಆದರೆ ನನಗೆ ಮಂಡ್ಯದ ಜನರ ಸೇವೆ ಮಾಡುವ ಕನಸಿದೆ. ಅವರ ಋಣ ನನ್ನ ಮೇಲಿದೆ. ಅವರು ನನ್ನ ಮಾತುಗಳನ್ನು ಕೇಳದಂತೆ ಕೇಬಲ್ ಕಟ್ ಮಾಡಬಹುದು. ನಮ್ಮ ಪ್ರೀತಿಯ ಕೊಂಡಿಯನ್ನು ಕಟ್ ಮಾಡುವುದು ಸಾಧ್ಯವಿಲ್ಲ.

ನಾನು ಎಲ್ಲಿಂದಲೋ ಬಂದವರು ಎನ್ನುತ್ತಾರೆ. ನಾನು 40 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. 27 ವರ್ಷ ಅಂಬರೀಷ್ ಪತ್ನಿ. ನಾನು ಹುಚ್ಚೇಗೌಡರ ಸೊಸೆ. ಈ ಮಣ್ಣಿನ ಸೊಸೆ. ಅಭಿಷೇಕ್ ತಾಯಿ. ಇದಕ್ಕಿಂತ ಸಾಕ್ಷಿ ಬೇಕಾ..?

ಮಂಡ್ಯದ ಜನ ಮುಗ್ಧರು. ಆದರೆ, ಮುಠ್ಠಾಳರಲ್ಲ. ಮಂಡ್ಯದ ಜನ ಸ್ವಾಭಿಮಾನವನ್ನು ತೋರಿಸಬೇಕಾದ ಕಾಲವಿದು. ಸ್ವಾಭಿಮಾನದಿಂದ ಮತ ಚಲಾಯಿಸಿ. ನಾನು ನಿಮ್ಮಲ್ಲಿ ಬೇಡುವುದು ಪ್ರೀತಿಯನ್ನು ಮಾತ್ರ.

 

ದರ್ಶನ್ : ಇಂದಿನಿಂದ ನಮ್ಮ ಪರೇಡ್ ಶುರು. ಅಮ್ಮನನ್ನು ಗೆಲ್ಲಿಸುವುದೇ ನಮ್ಮ ಜವಾಬ್ದಾರಿ. ಇವತ್ತು ಯಾರೇ ಬೈಯ್ಯಲಿ.. ಏನೇ ಅನ್ನಲಿ.. ನಮಗೆ ಎಷ್ಟೇ ಬೇಸರವಾಗಲಿ.. ನಾವು ಕೋಪ ಮಾಡಿಕೊಳ್ಳಲ್ಲ. ಮೇ 23ನೇ ತಾರೀಕು ನಮ್ಮನ್ನು ಆಡಿಕೊಂಡವರಿಗೆ, ನಮ್ಮನ್ನು ಟೀಕೆ ಮಾಡುತ್ತಿರುವವರಿಗೆ ಪಡಾಪಡಾ ಎಂಬ ಉತ್ತರ ಸಿಗುವಂತೆ ಮಾಡಿ.

ಯಶ್ : ನಾವೇನು ಪಾಕಿಸ್ತಾನದಿಂದ ಬಂದಿಲ್ಲ. ಇಲ್ಲೇ.. ಪಕ್ಕದ ಮೈಸೂರಿಂದ ಬಂದಿದ್ದೇವೆ. ನಾವೂ ಮಂಡ್ಯದ ಅಲೆಮನೆ ಬೆಲ್ಲ ತಿಂದವರೇ. ಇಲ್ಲಿಯ ಕೆರೆಗಳಲ್ಲಿ ಈಜು ಹೊಡೆದವರೇ. ಸುಮಲತಾ ಅಕ್ಕನ ಪರ ಮತ ಕೇಳುವುದು ತಪ್ಪು ಎನ್ನುವುದಾದರೆ, ನಾವು ಪದೇ ಪದೇ ಆ ತಪ್ಪು ಮಾಡುತ್ತೇವೆ. ದಯವಿಟ್ಟು 

#

I Love You Movie Gallery

Rightbanner02_butterfly_inside

Yaana Movie Gallery