ಚುಟುಚುಟು ಕಾಂಬಿನೇಷನ್ ಶರಣ್-ಅಶಿಕಾ ರಂಗನಾಥ್, ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಅವತಾರ ಪುರುಷ ಸಿನಿಮಾದ ಶೂಟಿಂಗ್ ಕೇರಳದ ಪಾಲಕ್ಕಾಡ್‍ನಲ್ಲಿ ನಡೆಯುತ್ತಿದೆ. ವಿಶೇಷವೆಂದರೆ, ಶೂಟಿಂಗ್ ನಡೀತಿರೋದು 300 ವರ್ಷ ಹಳೆಯ ಪುರಾತನ ಬಂಗಲೆಯಲ್ಲಿ. ಅದು ಬಂಗಲೆಯಷ್ಟೇ ಅಲ್ಲ, ಅಲ್ಲಿ ತುಂಬಾ ಕಟ್ಟುನಿಟ್ಟಾಗಿರಬೇಕು.
ಆ ಶೂಟಿಂಗ್ ಸ್ಪಾಟ್‍ನಲ್ಲಿ ಬಂಗಲೆ ಒಳಗೆ ಹೋಗುವವರು ಶೂ, ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ. ಮಾಂಸ ತಿನ್ನುವಂತಿಲ್ಲ. ಕೆಲವು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಏಕೆಂದರೆ, ಬಂಗಲೆಯ ಒಳಗೆ ಪುಟ್ಟದೊಂದು ದೇವಸ್ಥಾನವೂ ಇದೆ. ನಾವು ಅವುಗಳನ್ನೆಲ್ಲ ಶಿಸ್ತುಬದ್ಧವಾಗಿ ಪಾಲಿಸುತ್ತಲೇ ಶೂಟಿಂಗ್ ಮಾಡಿದ್ದೇವೆ ಎಂದಿದ್ದಾರೆ ಪುಷ್ಕರ್.
ಸಿಂಪಲ್ ಸುನಿ ಈ ಚಿತ್ರದಲ್ಲಿ ಶರಣ್‍ರನ್ನು ಜೂನಿಯರ್ ಆರ್ಟಿಸ್ಟ್ ಮಾಡಿದ್ದಾರೆ. ಚಿತ್ರ ವಿಚಿತ್ರ ವೇಷಗಳನ್ನು ತೊಡಿಸಿ ಅವತಾರ ಪುರುಷನನ್ನಾಗಿಸಿದ್ದಾರೆ. ಚಿತ್ರದಲ್ಲಿ ಬ್ಲಾಕ್ ಮ್ಯಾಜಿಕ್ ಕಥೆ ಇದೆಯಂತೆ. ಹಾಗಾದರೆ, ಇದು ಮಾಟಮಂತ್ರ ಚಿತ್ರವಾ..? ಹಾರರ್ ಚಿತ್ರವಾ..? ದೆವ್ವದ ಚಿತ್ರವಾ..? ಥ್ರಿಲ್ಲರ್ ಸಿನಿಮಾನಾ..? ವೇಯ್ಟ್ ಮಾಡಿ ನೋಡಿ.