` ನೋ ಪಾಲಿಟಿಕ್ಸ್ - ಅಣ್ಣಾವ್ರ ಹಾದಿಯಲ್ಲೇ ಪುನೀತ್ ಹೆಜ್ಜೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Puneeth Rajkumar says no to politics
Puneeth Rajkumar

ಸುಮಲತಾ ಪರ ಪುನೀತ್ ರಾಜ್‍ಕುಮಾರ್ ಕೂಡಾ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಎದ್ದಿತ್ತು. ಅಭಿಮಾನಿಗಳಲ್ಲಿ ಇದು ಗೊಂದಲ ಸೃಷ್ಟಿಸಿತ್ತು. ಏಕೆಂದರೆ ಪುನೀತ್ ಕಳೆದ ಚುನಾವಣೆಯಲ್ಲಿ ತಮ್ಮ ಅತ್ತಿಗೆಯ ಪರವೂ ಪ್ರಚಾರ ಮಾಡಿರಲಿಲ್ಲ. ಶಿವಣ್ಣ ಅವರ ಪತ್ನಿ ಗೀತಾ ಅವರ ಪರವಾಗಲೀ, ಸಂಬಂಧಿ ಮಧು ಬಂಗಾರಪ್ಪ ಪರವಾಗಿಯಾಗಲೀ ಪ್ರಚಾರ ಮಾಡಿದವರಲ್ಲ. ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳಿದ್ದ ಪುನೀತ್, ವೈಯಕ್ತಿಕವಾಗಿ ಅಂತರ ಕಾಯ್ದುಕೊಂಡಿದ್ದರು. ಈ ಬಾರಿಯೂ ಪುನೀತ್ ಅದೇ ಕೆಲಸ ಮಾಡಿದ್ದಾರೆ. ಅಭಿಮಾನಿಗಳಿಗೊಂದು ಸುದೀರ್ಘ ಪತ್ರ ಬರದಿದ್ದಾರೆ ಪುನೀತ್. ಪತ್ರದ ಸಾರಾಂಶ ಇಷ್ಟು.

ರಾಜಕೀಯ ನಮಗಲ್ಲ. ರಾಜಕಾರಣಕ್ಕೂ ನನಗೂ ಸಂಬಂಧ ಇಲ್ಲ. ನಾನು ಒಬ್ಬ ನಟನಾಗಿ ನಿಮ್ಮ ಜೊತೆ ಗುರುತಿಸಿಕೊಳ್ಳುತ್ತೇನೆ. ರಾಜಕಾರಣಿಯಾಗಿ ಅಲ್ಲ. ಎಲ್ಲರೂ ದಯವಿಟ್ಟು ಮತಗಟ್ಟೆಗೆ ಹೋಗಿ ತಪ್ಪದೇ ಮತದಾನ ಮಾಡಿ. ನಿಮ್ಮ ಆಯ್ಕೆ ನಿಮ್ಮದು. ಇಂತಹವರಿಗೇ ಮತ ಚಲಾಯಿಸಿ ಎಂದು ನಾನು ಸೂಚಿಸುವುದಿಲ್ಲ. ನನ್ನ ಅಭಿಮಾನಿಗಳಿಗೆ ನಾನು ಕೇಳಿಕೊಳ್ಳುವುದು ಇಷ್ಟೆ, ನಿಮ್ಮ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ. 

ದೇವೇಗೌಡರ ಕುಟುಂಬ, ಅಂಬರೀಷ್ ಅವರ ಕುಟುಂಬ ನಮ್ಮ ಕುಟುಂಬದಂತೆಯೇ. ಇಬ್ಬರೂ ನಮ್ಮ ಹಿತೈಷಿಗಳೇ. ಇಬ್ಬರಿಗೂ ಒಳ್ಳೆಯದಾಗಲಿ. ದಯವಿಟ್ಟು ನನ್ನ ಹೆಸರನ್ನು ರಾಜಕೀಯದಲ್ಲಿ ಬಳಸಿಕೊಳ್ಳಬೇಡಿ.

ಈ ಮೂಲಕ ಡಾ.ರಾಜ್ ಹಾದಿಯಲ್ಲೇ ಸಾಗುವ ಎಲ್ಲ ಸೂಚನೆಯನ್ನೂ ನೀಡಿದ್ದಾರೆ ಪುನೀತ್. ಅಫ್‍ಕೋರ್ಸ್.. ಇದು ಮೊದಲ ಬಾರಿಯೇನೂ ಅಲ್ಲ. ಈ ಹಿಂದೆ ಡಾ.ರಾಜ್ ಕೂಡಾ ಇದೇ ರೀತಿ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು. ಹಾಗೆಂದು, ನಾಡು, ನುಡಿಯ ವಿಷಯ ಬಂದಾಗ ಹೋರಾಟದ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ರಾಜ್, ಹೋರಾಟ ತಾರ್ಕಿಕ ಅಂತ್ಯ ಕಂಡ ನಂತರ ತೆರೆಮರೆಗೆ ಸರಿದು ಬಿಡುತ್ತಿದ್ದರು. ಅಪ್ಪಿತಪ್ಪಿಯೂ ರಾಜಕಾರಣಕ್ಕೆ ಕಾಲಿಡಲಿಲ್ಲ.

I Love You Movie Gallery

Rightbanner02_butterfly_inside

One Way Movie Gallery