ಮಿಸ್ಸಿಂಗ್ ಬಾಯ್ ಚಿತ್ರದ ಹೀರೋ ಗುರುನಂದನ್. ಕೊಲ್ಲ ಪ್ರವೀಣ್ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕ ರಘುರಾಮ್. ವಿಶೇಷ ಅಂದ್ರೆ, ಇದು ಇವರ 3ನೇ ಸಿನಿಮಾ. ಇವರು ನಿರ್ದೇಶಿಸಿದ ಈ ಹಿಂದಿನ ಎರಡು ಚಿತ್ರಗಳು ಬೇರೆ ಬೇರೆ ಕಾರಣಕ್ಕೆ ಸದ್ದು ಸುದ್ದಿ ಮಾಡಿದ್ದ ಚಿತ್ರಗಳು.
ರಘುರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ನಿರ್ದೇಶಕನಾಗಿ. ನಿರ್ದೇಶಕನಾಗುವ ಮುಂಚೆಯೇ ನಟನಾಗಿ ಗುರುತಿಸಿಕೊಂಡರು. ವಿ.ರವಿಚಂದ್ರನ್, ಜೋಗಿ ಪ್ರೇಮ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ರಘು, ನಿರ್ದೇಶಕರಾಗಿದ್ದು ಚೆಲುವೆಯೇ ನಿನ್ನ ನೋಡಲು ಚಿತ್ರದ ಮೂಲಕ. ಶಿವಣ್ಣ ಅಭಿನಯದ ಆ ಚಿತ್ರವನ್ನು ಜಗತ್ತಿನ 7 ಅದ್ಭುತಗಳಲ್ಲಿ ಚಿತ್ರೀಕರಿಸಲಾಗಿತ್ತು. ಅದಾದ ನಂತರ ಫೇರ್ & ಲವ್ಲಿ ಚಿತ್ರ ಜನ ಮೆಚ್ಚುಗೆ ಪಡೆಯಿತು. ಈಗ ಮಿಸ್ಸಿಂಗ್ ಬಾಯ್. ರಘುರಾಮ್ ಹಿಟ್ ನಿರೀಕ್ಷೆಯಲ್ಲಿದ್ದಾರೆ.