ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಅನಂತ್ ನಾಗ್ ಧ್ವನಿ ನೀಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಅನಂತ್ ಅವರ ಧ್ವನಿಯನ್ನು ವಿಶಿಷ್ಟವಾಗಿ ಬಳಸಿಕೊಳ್ಳಲಾಗಿತ್ತು. ಈಗ ಕವಚ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಅನಂತ್ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ವಾಯ್ಸ್ ನೀಡುವ ವೇಳೆ ಚಿತ್ರದ ಕೆಲವು ದೃಶ್ಯ, ಶಿವಣ್ಣನ ಅಭಿನಯ ನೋಡಿ ತುಂಬಾ ಮೆಚ್ಚಿಕೊಂಡರಂತೆ ಅನಂತ್.
ಜಿವಿಆರ್ ವಾಸು ನಿರ್ದೇಶನದ ಚಿತ್ರದಲ್ಲಿ, ಶಿವಣ್ಣ ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸುತ್ತಿದ್ದಾರೆ. ಬೇಬಿ ಮೀನಾಕ್ಷಿ, ಇಶಾ ಕೊಪ್ಪಿಕರ್, ಕೃತ್ತಿಕಾ, ರಾಜೇಶ್ ನಟರಂಗ ನಟಿಸಿರುವ ಚಿತ್ರದಲ್ಲಿ ವಸಿಷ್ಠ ಸಿಂಹ ವಿಲನ್. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಮೆಚ್ಚುಗೆ ಗಳಿಸಿವೆ. ಹೀಗೆ ಹಲವು ವಿಶೇಷತೆಗಳನ್ನೊಳಗೊಂಡ ಚಿತ್ರಕ್ಕೆ ಕಥಾ ಹಂದರ ಹೇಳುವವರಾಗಿ ಮೆರುಗು ಹೆಚ್ಚಿಸಿದ್ದಾರೆ ಅನಂತ್ ನಾಗ್.