ಹೊಸಬರೇ ನಟಿಸಿ ನಿರ್ದೇಶಿಸಿರುವ ವಿಭಿನ್ನ ಕಥಾಹಂದರ ಚಿತ್ರ ಅಡಚಣೆಗಾಗಿ ಕ್ಷಮಿಸಿ. ಈಗಾಗಲೇ ನಾರ್ವೆಯಲ್ಲಿ ನಡೆದ ಚಿತ್ರೋತ್ಸವದಲ್ಲಿ ಕನ್ನಡಿಗರು ಮೆಚ್ಚಿಕೊಂಡಿದ್ದರು. ಅದಾದ ಮೇಲೆ ಆಸ್ಟ್ರೇಲಿಯ, ರ್ಮನಿಯ ಕನ್ನಡಿಗರಿಗೂ ಸಿನಿಮಾ ಇಷ್ಟವಾಗಿತ್ತು. ಇದು ಮತ್ತೊಂದು ಆಪ್ತಮಿತ್ರ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೆಲ್ಲದರ ನಡುವೆ ಈಗ ಚಿತ್ರತಂಡಕ್ಕೆ ಖುಷಿ ಕೊಡುವ ಸುದ್ದಿ ಚೆನ್ನೈನಿಂದ ಬಂದಿದೆ.
ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ ಚೆನ್ನೈನ ಪಿವಿಆರ್‍ನಲ್ಲಿ ಅದೇ ದಿನ ರಿಲೀಸ್ ಆಗುತ್ತಿದೆ. ಹೊಸಬರ ಚಿತ್ರವೊಂದಕ್ಕೆ ಈ ಮಟ್ಟದ ಬೇಡಿಕೆ ಸಿಗುವುದು ಅಪರೂಪ. ಚಿತ್ರದ ನಾಯಕ ಮತ್ತು ನಿರ್ಮಾಪಕ ಪ್ರದೀಪ್ ವರ್ಮಾಗೆ ಈ ರೀತಿಯ ಮೆಚ್ಚುಗೆಯೇ ಖುಷಿ ಕೊಟ್ಟಿದೆ. ಭರತ್ ನಾವುಂದ ನಿರ್ದೇಶನದ ಸಿನಿಮಾ 60ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ.