ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ, ಮತ್ತೊಮ್ಮೆ ಅಭಿಮಾನಿಗಳ ಎದುರು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆಸ್ಪತ್ರೆಯಲ್ಲಿರುವ ವಿಜಯಲಕ್ಷ್ಮಿ ಅವರಿಗೆ ತುರ್ತಾಗಿ ಒಂದು ಆಪರೇಷನ್ ಆಗಬೇಕಿದೆ. ಆ ಆಪರೇಷನ್ ಶುರುವಾಗುವ ಮುನ್ನ 1 ಲಕ್ಷ ರೂ. ಕಟ್ಟಬೇಕು. ಮುಗಿದ ಮೇಲೆ ಉಳಿದ 1 ಲಕ್ಷ ರೂ. ಕಟ್ಟಬೇಕು. ಆದರೆ, ನನ್ನ ಬಳಿ ಹಣ ಇಲ್ಲ. ದಯವಿಟ್ಟು ಸಹಾಯ ಮಾಡಿ ಎಂದಿದ್ದಾರೆ ವಿಜಯಲಕ್ಷ್ಮಿ.
ಚಿತ್ರರಂಗದಲ್ಲಿ ನಟ ಸುದೀಪ್ ಬಿಟ್ಟರೆ ಬೇರೆಯವರು ಯಾರು ಕೂಡ ನನ್ನ ಸಹಾಯಕ್ಕೆ ಬಂದಿಲ್ಲ. ಆಪರೇಷನ್ ಲೇಟ್ ಆದಷ್ಟೂ ನೋವು ಹೆಚ್ಚಾಗುತ್ತೆ. ಅಭಿಮಾನಿಗಳನ್ನು ಬಿಟ್ಟರೆ ನನಗೆ ಬೇರೆ ಯಾರೂ ಇಲ್ಲ. ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ ವಿಜಯಲಕ್ಷ್ಮಿ.
ಇತ್ತೀಚೆಗೆ ಕಿರುತೆರೆ ನಟ ರವಿಪ್ರಕಾಶ್ ಎಂಬುವವರು 1 ಲಕ್ಷ ರೂ. ನೀಡಿ ಸಹಾಯ ಮಾಡಿದ್ದರು. ಆದರೆ, ಅವರ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು ವಿಜಯಲಕ್ಷ್ಮಿ. ಅದಾದ ನಂತರ ರವಿಪ್ರಕಾಶ್, ನಾನು ನೀಡಿದ್ದ 1 ಲಕ್ಷ ರೂ. ಹಣವನ್ನು ವಾಪಸ್ ಕೊಡಿಸಿ ಎಂದು ಚೇಂಬರ್‍ಗೆ ದೂರು ಕೊಟ್ಟಿದ್ದರು. ಈಗ ಮತ್ತೊಮ್ಮೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.