ಪೂಜಾ ಗಾಂಧಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಪೂಜಾ ಗಾಂಧಿ, ಹೋಟೆಲ್ ಲಲಿತ್ ಅಶೋಕ್‍ನಲ್ಲಿ ಬಾಡಿಗೆ ತೆಗೆದುಕೊಂಡಿದ್ದ ರೂಮ್‍ನ ಬಾಡಿಗೆ ಕಟ್ಟಿಲ್ಲ ಎಂದು ಹೋಟೆಲ್‍ನವರು ದೂರು ಕೊಟ್ಟಿದ್ದಾರೆ. 3 ಲಕ್ಷ, 53 ಸಾವಿರ ರೂ.ಗಳ ಬಿಲ್ ಕಟ್ಟಿಲ್ಲ ಎನ್ನುವುದು ಹೋಟೆಲ್‍ನವರ ದೂರು. ದೂರು ದಾಖಲಾಗುತ್ತಿದ್ದಂತೆ, ಹಣವನ್ನು ಪಾವತಿ ಮಾಡಿದ್ದಾರೆ ಪೂಜಾ ಗಾಂಧಿ.
ಇದೊಂದು ಮಿಸ್ ಕಮ್ಯುನಿಕೇಷನ್ನಿನಿಂದಾಗಿ ಆಗಿರುವ ಪ್ರಕರಣ ಅಷ್ಟೆ. ನನ್ನ ಪ್ರೊಡಕ್ಷನ್ ಹೌಸ್ ಚಿತ್ರಗಳ ಚರ್ಚೆಗಾಗಿ ಹೋಟೆಲ್ ರೂಂ ಬಾಡಿಗೆ ಪಡೆದಿದ್ದೆ. ಅದರ ಬಗ್ಗೆ ಇಲ್ಲಸಲ್ಲದ ವಿಚಾರಗಳೆಲ್ಲ ವರದಿಯಾಗುತ್ತಿವೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಕ್ಯಾರೆಕ್ಟರ್‍ಗೆ ಮಸಿ ಬಳಿಯಬೇಡಿ ಎಂದಿದ್ದಾರೆ ಪೂಜಾ ಗಾಂಧಿ.
ಪದೇ ಪದೇ ನನ್ನನ್ನೇ ಏಕೆ ವಿವಾದಕ್ಕೆ ಗುರಿ ಮಾಡಲಾಗುತ್ತಿದೆ. ನಾನೇನು ತಪ್ಪು ಮಾಡಿದ್ದೇನೆ. ನಾನೂ ಕೂಡಾ ಮದುವೆಯಾಗಬೇಕಿದೆ. ಹೀಗೆ ವಿವಾದಗಳಾದರೆ ನನ್ನ ಜೀವನ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ ಪೂಜಾ ಗಾಂಧಿ.
ಹೋಟೆಲ್ ಲಲಿತ್ ಅಶೋಕ್‍ನವರು ದೂರು ಕೊಟ್ಟಿರುವ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಹೆಸರು ಕೂಡಾ ಪೂಜಾ ಜೊತೆ ಪ್ರಸ್ತಾಪವಾಗಿತ್ತು. ಇದೆಲ್ಲವನ್ನೂ ಪೂಜಾ ನಿರಾಕರಿಸಿದ್ದಾರೆ.