ಪಡ್ಡೆಹುಲಿ ಚಿತ್ರದಲ್ಲಿ ನಾಡಿನ ಖ್ಯಾತ ಕವಿ, ವಚನಕಾರರ ಗೀತೆಗಳನ್ನು ಬಳಸಿಕೊಂಡಿರುವುದು ಗೊತ್ತಿದೆ ತಾನೇ. ಅವುಗಳನ್ನೂ ಸೇರಿಸಿ ಚಿತ್ರದಲ್ಲಿ ಒಟ್ಟು10 ಹಾಡುಗಳಿವೆಯಂತೆ. ಅದು ಇವತ್ತೇ ರಿಲೀಸ್ ಆಗುತ್ತಿವೆ. ಇಂದು ರಾತ್ರಿ 7 ಗಂಟೆಗೆ ಪಡ್ಡೆಹುಲಿಯ ಹಾಡುಗಳ ವೈಭವ, ಸಂಗೀತರಸಿಕರಿಗಾಗಿ ಮೀಸಲಾಗಲಿವೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ 10 ಹಾಡುಗಳು ವಿಭಿನ್ನವಾಗಿ ಮೂಡಿಬಂದಿವೆ. ಇನ್ನೂ ವಿಶೇಷವೆಂದರೆ ಪ್ರೇಮಲೋಕದ ನಂತರ (11 ಹಾಡುಗಳು) ಇಷ್ಟೊಂದು ಹಾಡುಗಳನ್ನು ಹೊತ್ತು ತರುತ್ತಿರುವ ಚಿತ್ರದಲ್ಲಿ ರವಿಚಂದ್ರನ್ ಅವರೇ ಹೀರೋಗೆ ಅಪ್ಪ. ಗುರು ದೇಶಪಾಂಡೆ ನಿರ್ದೇಶನದ ಚಿತ್ರ, ಹೀಗೆಯೇ ಹಲವಾರು ಕಾರಣಗಳಿಗೆ ಕುತೂಹಲ ಮೂಡಿಸಿದೆ.