` ಹೀಗೆಲ್ಲ ಮಾಡ್ತಿದ್ರೆ, ಸೋಷಿಯಲ್ ಮೀಡಿಯಾ ಬಿಡ್ತೇನೆ - ಅಭಿಮಾನಿಗೆ ಕಿಚ್ಚ ಎಚ್ಚರಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
i will quit this forum says sudeep
Sudeep

ಕಿಚ್ಚ ಸುದೀಪ್ ಅಭಿಮಾನಿ ಬಳಗ ದೊಡ್ಡದು. ಆ ಅಭಿಮಾನಿಗಳ ಸಾಗರದಲ್ಲಿ ಹುಚ್ಚು ಅಭಿಮಾನಿಗಳೂ ಇದ್ದಾರೆ. ಅಂತಹುದೇ ಒಬ್ಬ ಹುಚ್ಚು ಅಭಿಮಾನಿಯ ಅತಿರೇಕದ ವರ್ತನೆ ಸುದೀಪ್ ಅವರ ಮನ ನೋಯಿಸಿದೆ. ಆಗಿದ್ದಿಷ್ಟು. ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಗಾಯ ಮಾಡಿಕೊಂಡು, ಚಾಕುವಿನಿಂದ ಕಿಚ್ಚ ಸುದೀಪ್ ಎಂದು ಬರೆದುಕೊಂಡಿದ್ದಾನೆ. ರಕ್ತ ಸೋರಿದೆ. ಹೆಪ್ಪುಗಟ್ಟಿದೆ. ಅದನ್ನೇ ಫೋಟೋ ತೆಗೆದು ಸುದೀಪ್ ಅವರಿಗೇ ಕಳುಹಿಸಿಬಿಟ್ಟಿದ್ದಾನೆ. ಸುದೀಪ್ ರೊಚ್ಚಿಗೆದ್ದಿದ್ದಾರೆ.

ನಿಮ್ಮ ಅಭಿಮಾನ, ಪ್ರೀತಿಯನ್ನ ನಮ್ಮ ಸಿನಿಮಾ ನೋಡುವುದರ ಮೂಲಕ ತೋರಿಸಿ, ಸಾಕು. ಆದರೆ, ಈ ರೀತಿ ಮಾತ್ರ ಮಾಡಬೇಡಿ. ನಾನು ಸೋಷಿಯಲ್ ಮೀಡಿಯಾದಲ್ಲಿದ್ದೇನೆ ಎಂಬ ಕಾರಣಕ್ಕೇ ನೀವು ಹೀಗೆ ಮಾಡುತ್ತಿದ್ದೀರಿ ಎಂದಾದರೆ ಸೋಷಿಯಲ್ ಮೀಡಿಯಾ ಬಿಡುತ್ತೇನೆ. ದಯವಿಟ್ಟು ಇಂತಹ ಹುಚ್ಚು ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಸುದೀಪ್.

I Love You Movie Gallery

Rightbanner02_butterfly_inside

One Way Movie Gallery