` ರಜನಿಯಂತೆ.. ಶಿವಣ್ಣಂಗೂ ಎಸ್‍ಪಿಬಿ ಹಾಡೇ ಅದೃಷ್ಟ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
spb's song is lucky for shivanna
Kavacha Song By SPB

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರಗಳ ಹಿಂದೊಂದು ನಂಬಿಕೆಯಿದೆ. ರಜನಿ ಚಿತ್ರದಲ್ಲಿ ಎಸ್‍ಪಿಬಿ ಹಾಡು ಇರಲೇಬೇಕು. ಅದರಲ್ಲೂ ರಜನಿ ಇಂಟ್ರಡಕ್ಷನ್ ಸಾಂಗ್‍ಗೆ ಎಸ್‍ಪಿಬಿ ಹಾಡು ಇದ್ದರೆ ಅದು ಸೂಪರ್ ಹಿಟ್. ವಿಚಿತ್ರವೆಂದರೆ, ಎಸ್‍ಪಿಬಿ ಅವರನ್ನು ಬಿಟ್ಟು ಬೇರೆಯವರಿಂದ ಹಾಡಿಸಿದಾಗ ಕಬಾಲಿ, ಕಾಲಾ ದಂತಹ ಚಿತ್ರಗಳು ಸೋತಿವೆ. ಅದೇ ಎಸ್‍ಪಿಯವರನ್ನು ಮತ್ತೆ ಹಾಡಿಸಿದಾಗ ಅದೇ ರಜನಿ ಚಿತ್ರಗಳು ಗೆದ್ದಿವೆ. ಇದು ನಂಬಿಕೆಯ ವಿಷಯ. ಅಂಥದ್ದೇ ನಂಬಿಕೆ ಶಿವಣ್ಣನಿಗೂ ಎಸ್‍ಪಿಬಿ ಅವರಲ್ಲಿದೆ. ಅಫ್‍ಕೋರ್ಸ್.. ರಜನಿ ಚಿತ್ರಗಳಷ್ಟು ಗಾಢ ನಂಬಿಕೆ ಅಲ್ಲ ಎನ್ನಬಹುದು.

ಎಸ್‍ಪಿಬಿ ಹಾಡುಗಳು ನನ್ನ ಕೆರಿಯರ್‍ಗೆ ಪ್ಲಸ್ ಪಾಯಿಂಟ್. ಅವರು ನನಗಾಗಿ ಹಾಡಿದ ಹಾಡುಗಳೆಲ್ಲ ಹಿಟ್ ಆಗಿವೆ. ಕವಚ ಚಿತ್ರದ ರೆಕ್ಕೆಯಾ ಹಾಡನ್ನು ಕೂಡಾ ಎಸ್‍ಪಿಬಿ ಹಾಡಿದ್ದಾರೆ. ಎಸ್‍ಪಿಬಿ ಅವರಿಂದ ಹಾಡಿಸಿದ ನಂತರ ಹಾಡನ್ನು ಶೂಟ್ ಮಾಡಿದ್ದೇವೆ. ಇದು ಹಾಡಿನ ಸೊಗಸು ಹೆಚ್ಚಿಸಿದೆ. ಓಲ್ಡ್ ಈಸ್ ಗೋಲ್ಡ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ ಶಿವಣ್ಣ.

ಎಸ್‍ಪಿಬಿ ಹಾಡಿದ ಹಾಡನ್ನು ಸುದೀಪ್ ಬಿಡುಗಡೆ ಮಾಡಿದ್ದು ನನ್ನ ಖುಷಿಯನ್ನು ಡಬಲ್ ಆಗಿಸಿತು. ಅದು ತಂದೆ ಮಗಳ ಬಾಂಧವ್ಯ ಸಾರುವ ಗೀತೆ. ಹಾಡು ಕೇಳಿದ ಸುದೀಪ್ ಫೋನ್ ಮಾಡಿ, ಹಾಡನ್ನು ಇಷ್ಟಪಟ್ಟಿದ್ದನ್ನು ಹೇಳಿದರು. ಸುದೀಪ್‍ಗೆ ಧನ್ಯವಾದ ಎಂದಿದ್ದಾರೆ ಶಿವಣ್ಣ.

ಕವಚ ಚಿತ್ರ ಇದೇ ಯುಗಾದಿಗೆ ತೆರೆಗೆ ಬರುತ್ತಿದೆ. ಶಿವಣ್ಣ, ಇಶಾ ಕೊಪ್ಪಿಕರ್ ನಟಿಸಿರುವ ಚಿತ್ರಕ್ಕೆ ಜಿವಿಆರ್ ವಾಸು ನಿರ್ದೇಶಕ.

Sagutha Doora Doora Movie Gallery

Popcorn Monkey Tiger Movie Gallery