` ಲವ್ಲಿ ಸ್ಟಾರ್ ಪ್ರೇಮ್ @25 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
lovely star prem signed 25th film
Nenapirali Prem

ಲವ್ಲಿ ಸ್ಟಾರ್ ಎಂದೇ ಜನಪ್ರಿಯರಾಗಿರುವ ನಟ ನೆನಪಿರಲಿ ಪ್ರೇಮ್ 25ನೇ ಚಿತ್ರಕ್ಕೆ ರೆಡಿಯಾಗಿದ್ದಾರೆ. ತಮ್ಮ 25ನೇ ಸಿನಿಮಾ ಸ್ಮರಣೀಯವಾಗಿರಬೇಕು ಎಂಬ ಕನಸು ಎಲ್ಲರಿಗೂ ಇರುತ್ತೆ. 2004ರಲ್ಲಿ ಪ್ರಾಣ ಚಿತ್ರದೊಂದಿಗೆ ಬೆಳ್ಳಿತೆರೆಗೆ ಬಂದ ಪ್ರೇಮ್‍ಗೆ ಸಕ್ಸಸ್ ಸಿಕ್ಕಿದ್ದು 2ನೇ ಸಿನಿಮಾ ನೆನಪಿರಲಿ ಚಿತ್ರದಲ್ಲಿ. ಅಂದಿನಿಂದಲೂ ಪ್ರೇಮ್ ಅವರನ್ನು ಸ್ಯಾಂಡಲ್‍ವುಡ್ ಗುರುತಿಸುವುದು ನೆನಪಿರಲಿ ಪ್ರೇಮ್ ಎಂದೇ.

ನೆನಪಿರಲಿ, ಜೊತೆ ಜೊತೆಯಲಿ, ಚಾರ್‍ಮಿನಾರ್, ಪಲ್ಲಕ್ಕಿ, ಮಳೆ, ಚೌಕದಂತಹ ಹಿಟ್ ಚಿತ್ರಗಳನ್ನು ಕೊಟ್ಟಿರುವ ಪ್ರೇಮ್ ತಮ್ಮ 25ನೇ ಚಿತ್ರದ ಹೊಣೆಯನ್ನು ಹೊಸಬರಿಗೆ ನೀಡಿರುವುದು ವಿಶೇಷ. ನ್ಯೂರಾಲಜಿಸ್ಟ್ ಆಗಿರುವ ಡಾ.ರಾಘವೇಂದ್ರ ಪ್ರೇಮ್ 25ನೇ ಸಿನಿಮಾಗೆ ನಿರ್ದೇಶಕ. ಈ ಚಿತ್ರದಲ್ಲಿ ಪ್ರೇಮ್ 4 ಗೆಟಪ್ಪುಗಳಲ್ಲಿ ಕಾಣಿಸಿಕೊಳ್ಳುತ್ತಾರಂತೆ. 

 

#

I Love You Movie Gallery

Rightbanner02_butterfly_inside

Yaana Movie Gallery