` ನನ್ನ ಪರ ಪ್ರಚಾರಕ್ಕೆ ಚಿತ್ರರಂಗದಿಂದ ಯಾರೂ ಬರಲ್ಲ - ನಿಖಿಲ್ ಕುಮಾರಸ್ವಾಮಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nikhil kumaraswamya says noone will campaign for him
Nikhil Kumaraswamy

ಮಂಡ್ಯ ಕ್ಷೇತ್ರದಲ್ಲಿ ಸ್ಯಾಂಡಲ್‍ವುಡ್ ಇಬ್ಭಾಗವಾಗಲಿದೆ ಎಂಬ ಆತಂಕದಲ್ಲಿದ್ದರು ಅಭಿಮಾನಿಗಳು. ಏಕೆಂದರೆ, ಒಂದು ಕಡೆ ಸುಮಲತಾ ಅಂಬರೀಷ್ ಸ್ಪರ್ಧೆ. ಮತ್ತೊಂದು ಕಡೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ. ಕುಮಾರಸ್ವಾಮಿ, ಚಿತ್ರರಂಗದ ಗಣ್ಯ ನಿರ್ಮಾಪಕರಲ್ಲಿ ಒಬ್ಬರು. ಹೀಗಿರುವಾಗ, ಅವರ ಪರ ಒಂದಷ್ಟು ಜನ, ಇವರ ಪರ ಇನ್ನೊಂದಷ್ಟು ಜನ ಪ್ರಚಾರಕ್ಕೆ ಹೋದರೆ, ಸ್ಯಾಂಡಲ್‍ವುಡ್ ಇಬ್ಭಾಗವಾದಂತೆ ಎಂಬ ಆತಂಕ ಎಲ್ಲರಿಗೂ ಇತ್ತು.

ಅದರಲ್ಲೂ ದರ್ಶನ್ ಬಹಿರಂಗವಾಗಿ ಪ್ರಚಾರಕ್ಕೆ ರೆಡಿ ಎಂದಿದ್ದರೆ, ಯಶ್, ಸುಮಲತಾ ಅವರ ಸಂಪರ್ಕದಲ್ಲಿದ್ದಾರೆ. ಹೀಗಿರುವಾಗ ನಿಖಿಲ್ ಪರ ಯಾರು ಹೋಗ್ತಾರೆ..? ಈ ಪ್ರಶ್ನೆಗೆ ನಿಖಿಲ್ ಅವರೇ ಉತ್ತರ ಕೊಟ್ಟಿದ್ದಾರೆ.

ನನ್ನ ಪರ ಚಿತ್ರರಂಗದಿಂದ ಯಾರೂ ಪ್ರಚಾರಕ್ಕೆ ಬರಲ್ಲ. ನಾನು ಯಾರನ್ನೂ ಅಪ್ರೋಚ್ ಮಾಡಿಲ್ಲ. ನನ್ನನ್ನೂ ಯಾರೂ ಕೂಡಾ ಕೇಳಿಲ್ಲ. ನನಗೆ ಜೆಡಿಎಸ್ ಕಾರ್ಯಕರ್ತರೇ ಸಾಕು ಎಂದಿದ್ದಾರೆ ನಿಖಿಲ್.

Londonalli Lambodara Movie Gallery

Rightbanner02_butterfly_inside

Panchatantra Movie Gallery