ಕ್ಯೂಆರ್ ಕೋಡ್ ಎಂದರೆ ಏನು..? ಈಗಿನ ಕಾಲದ ನೆಟ್ ಪ್ರವೀಣರಿಗೆ ಅದನ್ನು ಬಿಡಿಸಿ ಹೇಳಬೇಕಾದ ಅಗತ್ಯವೇನಿಲ್ಲ. ನೀವು ಪೇಟಿಎಂನಲ್ಲೋ.. ಭೀಮ್ ಆ್ಯಪ್‍ನಲ್ಲೋ ಹಣ ಟ್ರಾನ್ಸ್‍ಫರ್ ಮಾಡಬೇಕೆಂದರೆ, ಆ ಅಕೌಂಟ್‍ನ ಪುಟ್ಟದೊಂದು ಕೊಲಾಜ್ ಮಾದರಿಯ ಚಿತ್ರವನ್ನು ಸ್ಕ್ಯಾನ್ ಮಾಡುತ್ತೀರಿ ತಾನೇ.. ಅದನ್ನು ಕ್ಯೂಆರ್ ಕೋಡ್ ಅಂತಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ, ಅದಕ್ಕೆ ಸಂಬಂಧಪಟ್ಟ ಖಾತೆ ಕಾಣಿಸಿಕೊಳ್ಳುತ್ತಲ್ಲ..
ಹಾಗೆಯೇ.. ಮಿಸ್ಸಿಂಗ್ ಬಾಯ್ ಚಿತ್ರತಂಡದವರೂ ಒಂದು ಕೋಡ್ ಮಾಡಿದ್ದಾರೆ. ಈ ಕ್ಯೂಆರ್ ಕೋಡ್‍ನ್ನು ಸ್ಕ್ಯಾನ್ ಮಾಡಿದರೆ ಸಾಕು, ಚಿತ್ರದ ಎಲ್ಲ ವಿವರಗಳೂ, ಮಾಹಿತಿಗಳೂ, ಫೋಟೋಗಳೂ, ವಿಡಿಯೋಗಳು ಎಲ್ಲವೂ ಒಟ್ಟಿಗೇ ಸಿಗುತ್ತವೆ. ಸೋಷಿಯಲ್ ನೆಟ್‍ವರ್ಕುಗಳಲ್ಲಿ ಈ ಕ್ಯೂಆರ್ ಕೋಡ್ ಸಿಗುತ್ತಿದೆ.
ಫಸ್ಟ್ ರ್ಯಾಂಕ್ ರಾಜು ಗುರುನಂದನ್ ಅಭಿನಯದ ಮಿಸ್ಸಿಂಗ್ ಬಾಯ್ ಸಿನಿಮಾ, ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಎಲ್ಲೋ ಬೆಳೆದು ದೊಡ್ಡವರಾದವರು.. ಹೆತ್ತವರನ್ನು ಹುಡುಕಿಕೊಂಡು ಬರುವ ಕಥೆ ಹೊಂದಿದೆ. ರಘುರಾಮ್ ನಿರ್ದೇಶನದ ಸಿನಿಮಾ ಮುಂದಿನ ವಾರ ತೆರೆಗೆ ಬರುತ್ತಿದೆ.