ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಪ್ರಥಮ ಚಿತ್ರ ಪಡ್ಡೆಹುಲಿ, ಸೆನ್ಸಾರ್ ಗೆದ್ದಿದೆ.ಸೆನ್ಸಾರ್‍ನಲ್ಲಿ ಪಡ್ಡೆಹುಲಿಗೆ ಯು/ಎ ಪ್ರಮಾಣದ ಪತ್ರ ಸಿಕ್ಕಿದೆ. ರಾಜಾಹುಲಿ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಯಲ್ಲಿ ನಿಶ್ವಿಕಾ ನಾಯ್ಡು ನಾಯಕಿ. ರವಿಚಂದ್ರನ್-ಸುಧಾರಾಣಿ, ಶ್ರೇಯಸ್ ತಂದೆತಾಯಿಯಾಗಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕ್‍ನಾಥ್, ಕನ್ನಡದ ಭಾವಗೀತೆ, ವಚನಗಳನ್ನ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಷ್ಣುವರ್ಧನ್ ಅವರ ರಾಮಾಚಾರಿ ಗೆಟಪ್‍ನಲ್ಲಿ ಒಂದು ವಿಶೇಷ ಹಾಡು ಕೂಡಾ ಇದೆ. ಬೇಸಗೆಯಲ್ಲಿ ಚಿತ್ರಮಂದಿರದಲ್ಲಿ ಗರ್ಜಿಸಲಿದೆ ಪಡ್ಡೆಹುಲಿ.