` ಸ್ಯಾಂಡಲ್‍ವುಡ್ ಸ್ಟಾರ್ಸ್ ದರ್ಶನ್ ಫೋಟೋ ಕ್ರೇಜ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's wildlife photos in fll demand
Darshan

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ದರ್ಶನ್ ವೈಲ್ಡ್ ಲೈಫ್ ಫೋಟೋಗ್ರಫಿಯ ಫೋಟೋಗಳ ಎಕ್ಸಿಬಿಷನ್ ಸೂಪರ್ ಸಕ್ಸಸ್. ಈ ಎಕ್ಸಿಬಿಷನ್ ನಂತರ ಸ್ಯಾಂಡಲ್‍ವುಡ್‍ನಲ್ಲಿ ತಾರೆಗಳ ನಡುವೆ ದರ್ಶನ್ ಫೋಟೋಗ್ರಫಿ ಕ್ರೇಜ್ ಕಾಣಿಸಿಕೊಂಡಿರೋದು ವಿಶೇಷ. ಏಕೆಂದರೆ, ಚಿತ್ರರಂಗದ ದೊಡ್ಡದೊಂದು ಸಮೂಹವೇ ದರ್ಶನ್ ಫೋಟೋಗಳನ್ನು ಖರೀದಿಸಿದೆ.

ನಿರ್ಮಾಪಕಿ ಶೃತಿ ನಾಯ್ಡು, ನಿರ್ಮಾಪಕ ಸೌಂದರ್ಯ ಜಗದೀಶ್, ಸೃಜನ್ ಲೋಕೇಶ್, ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ಧರ್ಮ ಕೀರ್ತಿರಾಜ್, ಯಶಸ್ ಸೂರ್ಯ, ಹರ್ಷ ಮೊದಲಾದವರು ದರ್ಶನ್ ಫೋಟೋ ಖರೀದಿಸಿ ಖುಷಿ ಪಟ್ಟಿದ್ದಾರೆ.

ದರ್ಶನ್ ಒಳ್ಳೆಯ ನಟ ಅನ್ನೋದು ಗೊತ್ತು. ಈಗ ಅವರೊಳಗೊಬ್ಬ ಒಳ್ಳೆಯ ಫೋಟೋಗ್ರಾಫರ್ ಇದ್ದಾನೆ ಎನ್ನುವುದು ಕೂಡಾ ಜಗತ್ತಿಗೆ ಗೊತ್ತಾಗಿದೆ. ನಾನು ಫೋಟೋಗಳಿಗೆ ಕೊಟ್ಟ ಹಣ ಕಡಿಮೆಯೇ. ಅವುಗಳಿಗೆ ಬೆಲೆ ಕಟ್ಟೋಕೆ ಆಗಲ್ಲ. ಒಂದೊಳ್ಳೆ ಕೆಲಸಕ್ಕಾಗಿ ಆ ಹಣ ಉಪಯೋಗವಾಗುತ್ತಿದೆ. ಆ ಖುಷಿ ನಮಗಿದೆ ಎಂದಿದ್ದಾರೆ ಫೋಟೋಗಳನ್ನು ಖರೀದಿಸಿದ ತಾರೆಯರು.

#

I Love You Movie Gallery

Rightbanner02_butterfly_inside

Yaana Movie Gallery