ಶಿವರಾಜ್‍ಕುಮಾರ್ ಅಭಿನಯದ ರವಿವರ್ಮ ನಿರ್ದೇಶನದ ಚಿತ್ರ ರುಸ್ತುಂ. ವಿವೇಕ್ ಒಬೇರಾಯ್ ಪ್ರಮುಖ ಪಾತ್ರವೊಂದಲ್ಲಿ ನಟಿಸುತ್ತಿರುವ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ. ರಚಿತಾ ರಾಮ್, ವಿವೇಕ್ ಒಬೇರಾಯ್‍ಗೆ ಜೋಡಿಯಾಗಿದ್ದರೆ, ನಟಿ ಮಯೂರಿ ಶಿವಣ್ಣನಿಗೆ ತಂಗಿಯಾಗಿದ್ದಾರೆ.
ಹೀಗೆ ಸ್ಪೆಷಲ್ಲುಗಳ ಸರಮಾಲೆಯನ್ನೇ ಹೊಂದಿರುವ ಚಿತ್ರದಲ್ಲಿ ರವಿಶಂಕರ್ ಗಾಯಕರಾಗಿದ್ದಾರೆ. ರವಿಶಂಕರ್, ಶಾಸ್ತ್ರೀಯವಾಗಿ ಸಂಗೀತ ಕಲಿತಿರುವವರು. ಅದ್ಭುತ ಗಾಯಕ. ಸದ್ಯಕ್ಕೆ ನಟನಾಗಿ ಫುಲ್ ಬ್ಯುಸಿ.
ಅವರೀಗ ರುಸ್ತುಂ ಚಿತ್ರಕ್ಕೆ ಹಾಡೊಂದನ್ನು ಹಾಡಿದ್ದಾರೆ. ಅದೂ ಟೈಟಲ್ ಟ್ರ್ಯಾಕ್. ಎಂಜಾಯ್...