ರಾಜ್‍ಸೂರ್ಯ ನಿರ್ದೇಶನದ ಸಂತೋಷ್, ಶೃತಿ ಪ್ರಕಾಶ್ ಅಭಿನಯದ ಲಂಡನ್‍ನಲ್ಲಿ ಲಂಬೋದರ ಸಿನಿಮಾ ಬಿಡುಗಡೆಗೆ ಮುಹೂರ್ತ ಕೂಡಿ ಬಂದಿದ. ಮಾರ್ಚ್ 29ಕ್ಕೆ ಲಂಬೋದರ ರಾಜ್ಯದ ಥಿಯೇಟರುಗಳಲ್ಲಿ ಪ್ರತ್ಯಕ್ಷವಾಗ್ತಾನೆ.
ಇಷ್ಟಕ್ಕೂ ಚಿತ್ರದ ಕಥೆ ಏನು ಗೊತ್ತಾ..? ಜ್ಯೋತಿಷ್ಯ, ಭವಿಷ್ಯ, ನಕ್ಷತ್ರ, ರಾಶಿ ನಂಬುವವರು ಅದರಂತೆಯೇ ನಡೆಯಲು ಹೋಗಿ ಏನೇನೆಲ್ಲ ಅನಾಹುತ ಮಾಡಿಕೊಳ್ತಾರೆ ಅನ್ನೋದು ಚಿತ್ರದ ಕಥೆ. ನಾಯಕನ ನಂಬಿಕೆಗಳು, ಅವು ತಂದೊಡ್ಡುವ ಆತಂಕಗಳು ಬೆಂಗಳೂರಿನಿಂದ, ಲಂಡನ್‍ವರೆಗೆ ಕೊಂಡೊಯ್ಯುತ್ತವೆ ಎನ್ನುವ ನಿರ್ದೇಶಕ ರಾಜ್ ಸೂರ್ಯ, ಚಿತ್ರದ ಮೇಲೆ ಭಾರಿ ಭರವಸೆ ಇಟ್ಟಿದ್ದಾರೆ. ಪ್ರಕಾಶ್, ಕುಮಾರ್ ಮೊದಲಾದವರು ಸೇರಿ, ಕ್ರೌಡ್ ಫಂಡಿಂಗಿನಲ್ಲೇ ಮಾಡಿರುವ ಸಿನಿಮಾ ಲಂಡನ್‍ನಲ್ಲಿ ಲಂಬೋದರ.