ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ ಈಗ ಉಪವಾಸ ಕುಳಿತಿದ್ದಾರೆ. ನಟ ರವಿಪ್ರಕಾಶ್ ಅವರನ್ನ ಅರೆಸ್ಟ್ ಮಾಡಬೇಕು, ಇಲ್ಲದೇ ಹೋದರೆ ನಾನು ಅನ್ನ, ನೀರು ಮುಟ್ಟಲ್ಲ ಎಂದು ಶಪಥ ಮಾಡಿದ್ದಾರೆ ವಿಜಯಲಕ್ಷ್ಮಿ.
ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ, ನಟ ರವಿಪ್ರಕಾಶ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ನಾನು ವಿಜಯಲಕ್ಷ್ಮಿ ಅವರಿಗೆ 1 ಲಕ್ಷ ರೂ. ನೀಡಿದ್ದೆ. ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಈಗಿನ ದೂರು ಸಹಿಸೋಕೆ ಆಗ್ತಿಲ್ಲ ಎಂದಿರೋ ನಟ ರವಿಪ್ರಕಾಶ್, ನಾನು ಕೊಟ್ಟ ಹಣ ನನಗೆ ವಾಪಸ್ ಕೊಡಿಸಿ ಎಂದು ಫಿಲಂಚೇಂಬರ್ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮಿಗೆ ನಾನು ಯಾವುದೇ ಕಿರುಕುಳ ನೀಡಿಲ್ಲ ಎಂದು ಆಡಿಯೋ ಮತ್ತು ಮೆಸೇಜ್ ದಾಖಲೆ ನೀಡಿದ್ದಾರೆ.