ಇದೇ ಮಾರ್ಚ್ 17ಕ್ಕೆ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಏನೇನೋ ಗಿಫ್ಟ್ ಕೊಡ್ತಾರೆ. ಆದರೆ, ಪುನೀತ್ ಅವರ ಈ ಸ್ಪೆಷಲ್ ಅಭಿಮಾನಿ, ನಟಸಾರ್ವಭೌಮನ ಡೈರೆಕ್ಟರ್ ಪವನ್ ಒಡೆಯರ್ ಕೊಡ್ತಿರೋ ಗಿಫ್ಟೇ ಬೇರೆ.
ನಟಸಾರ್ವಭೌಮ ಚಿತ್ರದ ಟೈಟಲ್ ಟ್ರ್ಯಾಕ್ ಗೊತ್ತಿದ್ಯಲ್ಲ.
ನಟಸಾರ್ವಭೌಮ.. ಹೀ ಈಸ್ ಕಿಂಗ್ ಆಫ್ ದಿ ಸಿನಿಮಾ.. ಕಾಲಿಟ್ರೆ ಕೇಡಿಗಳೆಲ್ಲ ಇನ್ನು ಗಪ್ಪುಚುಪ್ಪು.. ಡ್ಯಾನ್ಸ್ ವಿತ್ ಅಪ್ಪು..
ಈಗ ಇದೇ ಟ್ರ್ಯಾಕ್‍ಗೆ ಪವನ್ ಒಡೆಯರ್ ಹೊಸ ಲಿರಿಕ್ಸ್ ಜೋಡಿಸಿದ್ದಾರೆ. ಈ ಹೊಸ ಸಾಹಿತ್ಯದಲ್ಲಿ ಅದೇ ಟ್ರ್ಯಾಕ್‍ನಲ್ಲಿ ಒಂದು ಹಾಡು ರೆಡಿಯಾಗಿದೆ. ಅದು ಅಪ್ಪು ಹುಟ್ಟುಹಬ್ಬಕ್ಕೆ ಪವನ್ ಒಡೆಯರ್ ಗಿಫ್ಟು.
ಆಕಾಶದಿ ಅಭಿಯಾಗಿ ಕನ್ನಡ ಪೃಥ್ವಿಗೆ ನೀ ಅರಸು.. ಅಣ್ಣಾಬಾಂಡ್ ದೊಡ್ಮನೆ ಹುಡುಗನ ನಾನ್‍ಸ್ಟಾಪ್ ಸ್ಟೆಪ್ಪು.. ಇದು ಹೊಸ ಸಾಹಿತ್ಯ. ಹಾಡು... ಅಪ್ಪು ಹುಟ್ಟುಹಬ್ಬದ ದಿನ ಮಧ್ಯರಾತ್ರಿ 12ಕ್ಕೆ ರಿಲೀಸ್ ಆಗಲಿದೆ.