ಭೈರಾದೇವಿ ಚಿತ್ರದ ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ, ಮತ್ತೊಮ್ಮೆ ಗಾಳಿ ಗೆಟಪ್‍ನಲ್ಲಿ ಅದೇ ಸ್ಮಶಾನದಲ್ಲಿ ಎದ್ದು ನಿಲ್ಲುತ್ತಿದ್ದಾರೆ. ಶಾಂತಿನಗರದ ಸ್ಮಶಾನದಲ್ಲಿ ಬಿದ್ದಿದ್ದ ರಾಧಿಕಾ, ಅದೇ ಜಾಗದಲ್ಲಿ ಕಾಳಿ ಗೆಟಪ್‍ನಲ್ಲಿ ಹಾಡಿಗೆ ನೃತ್ಯ ಮಾಡಲಿದ್ದಾರೆ.
ಒಟ್ಟು 100 ಮಂದಿ ರಾಧಿಕಾ ಜೊತೆ ಕಾಳಿ ಗೆಟಪ್‍ನಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ ನಿರ್ದೇಶಕ ಶ್ರೀಜಯ್. ಮಾರ್ಚ್ 21ರಿಂದ ಶೂಟಿಂಗ್ ಶುರುವಾಗಲಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.