ಇದೇ ತಿಂಗಳು ತೆರೆಗೆ ಬರುತ್ತಿರುವ ಮಿಸ್ಸಿಂಗ್ ಬಾಯ್ ಸಿನಿಮಾ, ಟ್ರೇಲರ್, ವಿಭಿನ್ನ ಕಥಾ ಹಂದರದಿಂದಾಗಿಯೇ ಗಮನ ಸೆಳೆದಿರುವ ಚಿತ್ರ. ಕಿಚ್ಚನ ಮೆಚ್ಚುಗೆ ಪಡೆದಿದ್ದ ಮಿಸ್ಸಿಂಗ್ ಬಾಯ್ ಚಿತ್ರಕ್ಕೆ, ಕಿಚ್ಚನ ಎದುರು ಮಿಂಚಿದ್ದ ನಟನಿಂದಲೂ ಹಾರೈಕೆ ಸಿಕ್ಕಿದೆ. ಈಗ ಚಿತ್ರದಲ್ಲಿ ಕಿಚ್ಚನ ಎದುರು ನಟಿಸಿದ್ದ ನಾನಿ, ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭ ಕೋರಿದ್ದಾರೆ.
ತೆಲುಗು, ತಮಿಳಿನ ಬಹುಬೇಡಿಕೆಯ ನಟರಾಗಿರುವ ನಾನಿ, ಮಿಸ್ಸಿಂಗ್ ಬಾಯ್ ಚಿತ್ರದ ನಿರ್ಮಾಪಕ ಪಮ್ಮಿಯನ್ನು ಹೊಗಳಿದ್ದಾರೆ. ಪಮ್ಮಿ ಎಂದರೆ, ಕೊಲ್ಲ ಪ್ರವೀಣ್. ಗುರುನಂದನ್ ಅಭಿನಯದ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದು ರಘುರಾಮ್.