ನಾಗಮಂಡಲ, ಸೂರ್ಯವಂಶ, ರಂಗಣ್ಣ, ಅರುಣೋದಯ, ಜೋಡಿಹಕ್ಕಿ.. ಖ್ಯಾತಿಯ ನಟಿ ವಿಜಯಲಕ್ಷ್ಮಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ವಿಜಯಲಕ್ಷ್ಮಿ, ನೆರವು ನೀಡಿ ಎಂದು ಬಹಿರಂಗವಾಗಿಯೇ ಚಿತ್ರರಂಗದ ಗಣ್ಯರಿಗೆ ಮನವಿ ಮಾಡಿದ್ದರು. ನಟ ಸುದೀಪ್ 1 ಲಕ್ಷ ರೂ. ಕೊಟ್ಟಿದ್ದರು. ಹಲವರು ನೆರವಿಗೆ ಧಾವಿಸಿ ಬಂದಿದ್ದರು. ಹಾಗೆ ನೆರವಿಗೆ ಹೋದವರಲ್ಲಿ ಒಬ್ಬರು ನಟ ರವಿಪ್ರಕಾಶ್.
ವಿಜಯಲಕ್ಷ್ಮಿ ಅವರ ಕಷ್ಟಕ್ಕೆ ಕರಗಿದ ರವಿಪ್ರಕಾಶ್, 1 ಲಕ್ಷ ರೂ. ಹಣ ನೀಡಿದ್ದಷ್ಟೇ ಅಲ್ಲದೆ, ಬಟ್ಟೆ, ಔಷಧಿಗಳನ್ನು ಕೂಡಾ ಒದಗಿಸಿದ್ದಾರೆ. ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ ಕಷ್ಟಸುಖ ವಿಚಾರಿಸಿದ್ದಾರೆ. ಆದರೆ, ಇದೇ ಈಗ ರವಿಪ್ರಕಾಶ್ ಅವರಿಗೆ ಮುಳುವಾದಂತೆ ಕಾಣುತ್ತಿದೆ.
ರವಿಪ್ರಕಾಶ್ ಆರೋಗ್ಯ ವಿಚಾರಿಸುವ ನೆಪದಲ್ಲಿ ಪ್ರತಿದಿನ ಕರೆ ಮಾಡಿ, ಮೆಸೇಜ್ ಮಾಡಿ ಹಿಂಸಿಸುತ್ತಿದ್ದರು. ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಿಜಯಲಕ್ಷ್ಮಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ನೆರವು ನೀಡಿದ್ದೆ. ಮಾನವೀಯತೆಯಿಂದ ಸ್ಪಂದಿಸಿದ್ದೆ. ನಾನು ಅವರಿಗೆ ಮಾಡಿರುವ ಮೆಸೇಜ್, ಮಾಡಿರುವ ಎಲ್ಲ ಕರೆಗಳ ಆಡಿಯೋ ರೆಕಾರ್ಡಿಂಗ್ ಇದೆ. ಬೇಕಾದರೆ ಚೆಕ್ ಮಾಡಿಕೊಳ್ಳಿ ಎಂದು ರವಿಪ್ರಕಾಶ್ ತಿರುಗೇಟು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮೆಸೇಜ್ ಮತ್ತು ಕಾಲ್ ರೆಕಾರ್ಡ್‍ಗಳನ್ನು ಬಹಿರಂಗ ಮಾಡಿದ್ದಾರೆ.
ಮೆಸೇಜ್‍ಗಳಲ್ಲಾಗಲೀ, ಕರೆಗಳಲ್ಲಾಗಲೀ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯದ ಅಥವಾ ಅಸಭ್ಯ ವರ್ತನೆಯ ಸುಳಿವು ಕಾಣಿಸುತ್ತಿಲ್ಲ. ಹಾಗಾದರೆ, ವಿಜಯಲಕ್ಷ್ಮಿ ಹೇಳ್ತಿರೋದು ಸುಳ್ಳಾ..?