ಯಾವುದೋ ಕಾರಣಕ್ಕಾಗಿ, ತಾಯಿಯನ್ನು ಕಳೆದುಕೊಳ್ಳೋ ಮಕ್ಕಳು. 30 ವರ್ಷ ಕಳೆದ ಮೇಲೆ ತಾಯಿಯನ್ನು ಹುಡುಕಿಕೊಂಡು ಬರುವ ಮಗ. ಇದು ಹುಬ್ಬಳ್ಳಿಯಲ್ಲಿ ನಡೆದಿದ್ದ ರಿಯಲ್ ಸ್ಟೋರಿ. ಅಂಥಾದ್ದೊಂದು ಪ್ರಕರಣವನ್ನು ಕೇವಲ ಮಾನವೀಯತೆ ಮೇಲೆ ಹುಡುಕಿಕೊಟ್ಟಿದ್ದ ಪೊಲೀಸ್ ಅಧಿಕಾರಿಯ ಹೆಸರು ಲವಕುಮಾರ್. ಅದೇ ರಿಯಲ್ ಕಥೆಯನ್ನು ಮಿಸ್ಸಿಂಗ್ ಬಾಯ್ ಎಂದು ಸಿನಿಮಾ ಮಾಡಿದ್ದಾರೆ ನಿದೇಶಕ ರಘುರಾಮ್.
ಗುರುನಂದನ್ ತಾಯಿಯನ್ನು ಹುಡುಕುವ ಮಗನಾಗಿ ನಟಿಸಿದ್ದಾರೆ. ರಿಯಲ್ ಕಥೆಯಲ್ಲಿ ಹೇಗೆ.. ಕಥೆಯ ಜಾಡು ಸಾಗುತ್ತದೋ.. ಅದೇ ಜಾಡಿನಲ್ಲಿ ಚಿತ್ರಕಥೆ ಕಟ್ಟಿದ್ದಾರೆ ರಘುರಾಮ್. ಎಲ್ಲಿಯೂ ಇದು ವಾಸ್ತವಕ್ಕೆ ದೂರ ಎನಿಇಸುವುದಿಲ್ಲ ಎಂದು ಭರವಸೆ ಕೊಡ್ತಾರೆ ರಘುರಾಮ್