Print 
darshan, shylaja nag online piracy yajamana, beesu suresh,

User Rating: 0 / 5

Star inactiveStar inactiveStar inactiveStar inactiveStar inactive
 
piracy criminals attack yajaman too
Yajamana

ಭಾರತಾದ್ಯಂತ ಸದ್ದು ಸುದ್ದಿ ಮಾಡಿದ ಕೆಜಿಎಫ್‍ಗೂ ಪೈರಸಿ ಕಾಟ ತಪ್ಪಿರಲಿಲ್ಲ. ರಾಕ್‍ಲೈನ್ ಬ್ಯಾನರ್‍ನ ನಟಸಾರ್ವಭೌಮ ಚಿತ್ರವನ್ನೂ ಕಳ್ಳರು ಕದ್ದಿದ್ದರು. ಅಂಥದ್ದೇ ಶಾಕ್ ಯಜಮಾನನಿಗೂ ಕೊಟ್ಟಿದ್ದಾರೆ ಪೈರಸಿ ಕಿರಾತಕರು.

ದರ್ಶನ್ ಅಭಿನಯದ ಯಜಮಾನ, ಬಾಕ್ಸಾಫೀಸಲ್ಲಿ ಅಬ್ಬರಿಸುತ್ತಿದ್ದರೆ, ಅದೇ ವೇಳೆಯಲ್ಲಿ ಯಜಮಾನನ ಪೈರಸಿ ಸಿಡಿ ಮಾಡಿದ್ದಾರೆ. ಆನ್‍ಲೈನ್‍ಗೂ ವಿಡಿಯೋ ಬಿಟ್ಟಿದ್ದಾರೆ.

ಭರ್ಜರಿ ಬೆಳೆ ನಿರೀಕ್ಷೆಯಲ್ಲಿದ್ದ ನಿರ್ಮಾಪಕಿ ಶೈಲಜಾ ನಾಗ್‍ಗೆ ಇದು ಶಾಕ್ ಕೊಟ್ಟಿರುವುದು ಹೌದು. ಪೈರಸಿ ಮಟ್ಟ ಹಾಕುವ ನಿಟ್ಟಿನಲ್ಲಿ ಹೋರಾಟ ನಿರಂತರವಾಗಿ ಜಾರಿಯಲ್ಲಿಟ್ಟಿರುವ ನಿರ್ಮಾಪಕರು ಚಿತ್ರವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ, ಪೈರಸಿ ಮಾಡುವವರೋ.. ಥೇಟು ಭಯೋತ್ಪಾದಕರಂತೆ. ಹಿಡಿಯಬಹುದು. ಕೊಲ್ಲಲೂಬಹುದು. ಆದರೆ, ಅದು ನಿರ್ವಂಶವಾಗಲ್ಲ.