sಸುಮಲತಾ ಅವರು ಗಂಡ ಸತ್ತ ಒಂದು ತಿಂಗಳಲ್ಲಿ ರಾಜಕೀಯಕ್ಕೆ ಬಂದಿದ್ದಾರೆ ಎಂದರೆ ಏನರ್ಥ..? ಎಂದಿರುವ ರೇವಣ್ಣ, ನಂತರ ಕ್ಷಮೆಯನ್ನೂ ಕೇಳಿಲ್ಲ. ಈಯಮ್ಮನಿಗೆ ರಾಜಕೀಯ ಬೇಕಿತ್ತಾ..? ಎಂದಿರೋ ರೇವಣ್ಣ, ಕ್ಷಮೆ ಕೇಳಲ್ರೀ.. ಕ್ಷಮೆ ಕೇಳುವಂತ ತಪ್ಪು ಏನ್ ಮಾಡಿದ್ದೀನಿ ನಾನು..? ಹಿಂದೂ ಸಂಸ್ಕøತಿ ಪ್ರಕಾರವೇ ಮಾತನಾಡಿದ್ದೀನಿ.. ಎಂದು ಉತ್ತರ ಕೊಟ್ಟಿದ್ದಾರೆ.
ರೇವಣ್ಣನವರ ಮಾತುಗಳಿಗೆ ಸುಮಲತಾ ಕೊಟ್ಟರೋ ಪ್ರತಿಕ್ರಿಯೆ ಇಷ್ಟೆ. ನಾನು ರೇವಣ್ಣನವರ ಮಾತುಗಳಿಗೆ ಪ್ರತಿಕ್ರಿಯೆ ಕೊಡಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲ್ಲ. ನನ್ನ ಬೆಂಬಲಿಗರಿಗೂ ಅಷ್ಟೆ, ಅವರ ಬಗ್ಗೆ ಕೇವಲವಾಗಿ ಮಾತನಾಡಬೇಡಿ ಎಂದು ಹೇಳಿದ್ದೇನೆ. ನಿಖಿಲ್ ಕೂಡಾ ನನ್ನ ಮಗ ಅಭಿಯಿದ್ದ ಹಾಗೆ. ಆತನ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ನನಗೆ ನೋವಾಗುತ್ತೆ ಎಂದು ಉತ್ತರ ಕೊಟ್ಟಿದ್ದಾರೆ ಸುಮಲತಾ.