` ಚಿತ್ರಲೋಕ ಮತ್ತೊಂದು ಮೈಲಿಗಲ್ಲು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
chitraloka reached yet another milestone
One More Milestone To Chitraloka

ಕನ್ನಡ ಮಾಧ್ಯಮ ಲೋಕದಲ್ಲಿ ಚಿತ್ರಲೋಕ ಡಾಟ್ ಕಾಂ ಹಲವು ದಾಖಲೆ ಬರೆದಿದೆ. ಭಾರತದಲ್ಲಿ ಗೂಗಲ್ ಕಾಲಿಡುವ ಮುನ್ನವೇ, ಇಂಟರ್‍ನೆಟ್ ಎನ್ನುವುದು ಆಕಾಶದೀಪವಾಗಿದ್ದ ಸಮಯದಲ್ಲೇ ಹುಟ್ಟಿಕೊಂಡಿದ್ದ ಚಿತ್ರಲೋಕ ಡಾಟ್ ಕಾಂ, ಇವತ್ತಿಗೂ ನಂಬರ್ 1 ಸಿನಿಮಾ ವೆಬ್‍ಸೈಟ್.

19 ವರ್ಷಗಳ ಹಿಂದೆ ಶುರುವಾದ ಚಿತ್ರಲೋಕ ಡಾಟ್ ಕಾಮ್ ಹೆಸರಲ್ಲಿ ಎರಡು ಲಿಮ್ಕಾ ದಾಖಲೆಗಳೂ ಇವೆ. ಲಕ್ಷಾಂತರ ಓದುಗರನ್ನು ಹೊಂದಿರುವ ಚಿತ್ರಲೋಕ, ಟ್ವಿಟರ್‍ನಲ್ಲಿ ಹೊಸ ದಾಖಲೆ ಬರೆದಿದೆ. 1 ಲಕ್ಷ ಫಾಲೋವರ್‍ಗಳನ್ನು ಸಂಪಾದಿಸಿದೆ.

ಚಿತ್ರಲೋಕದ ಈ ಬೆಳವಣಿಗೆ ಆಗ್ರ್ಯಾನಿಕ್ ಗ್ರೋತ್. ಅಂದರೆ ಪ್ರಮೋಷನ್ ಇಲ್ಲದ, ಕೇವಲ ಓದುಗರೇ ಇಷ್ಟಪಟ್ಟು ಫಾಲೋ ಮಾಡಿ ಗಳಿಸಿದ ಸಾಧನೆ.  ನಿಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿ.

ಕೆ.ಎಂ.ವೀರೇಶ್

ಸಂಪಾದಕ

ಚಿತ್ರಲೋಕ ಡಾಟ್ ಕಾಂ