ಕನ್ನಡದಲ್ಲಿ ತಮಗಿಷ್ಟವಾದ ಪ್ರತಿಯೊಬ್ಬರ ಚಿತ್ರವನ್ನೂ ಮೆಚ್ಚಿ, ಪ್ರೋತ್ಸಾಹಿಸುವ, ಬೆನ್ನುತಟ್ಟುವ, ಸಾಧ್ಯವಾದಷ್ಟೂ ಹೆಗಲಿಗೆ ಹೆಗಲು ಕೊಡುವ ನಟ ಜಗ್ಗೇಶ್, ದರ್ಶನ್‍ರ ಯಜಮಾನ ಚಿತ್ರವನ್ನು ಕದ್ದುಮುಚ್ಚಿ ನೋಡಿಕೊಂಡು ಬಂದಿದ್ದಾರೆ. ಥಿಯೇಟರಿನಲ್ಲೇ.
ಕೆಜಿಎಫ್ ಚಿತ್ರವನ್ನು ಮಂಕಿ ಕ್ಯಾಪ್ ಹಾಕಿಕೊಂಡು ಹೋಗಿ ನೋಡಿ, ಮಿರ್ಚಿ ಮಂಡಕ್ಕಿ ತಿಂದು ಬಂದಿದ್ದ ಜಗ್ಗೇಶ್, ಯಜಮಾನ ಚಿತ್ರವನ್ನು ಮುಸುಕು ಹಾಕಿಕೊಂಡು ಹೋಗಿ ನೋಡಿ ಬಂದಿದ್ದಾರೆ.
ಯಾವ ಥಿಯೇಟರಿನಲ್ಲಿ ಅಂತೀರಾ..? ಗೊತ್ತಾಗ್ಬಿಟ್ರೆ ಬಿಟ್‍ಬಿಡ್ತೀರಾ..? ಅದಕ್ಕೇ ಜಗ್ಗೇಶ್ ಅದನ್ನು ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ.
ಯಜಮಾನ ಚಿತ್ರವಂತೂ ದರ್ಶನ್‍ರ ಈ ಹಿಂದಿನ ಎಲ್ಲ ಚಿತ್ರಗಳ ಬಾಕ್ಸಾಫೀಸ್ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ. ದರ್ಶನ್ ಹ್ಯಾಪಿ. ಹರಿಕೃಷ್ಣ ಹ್ಯಾಪಿ. ನಿರ್ಮಾಪಕಿ ಶೈಲಜಾ ನಾಗ್ ಅವರಂತೂ ಡಬಲ್ ಹ್ಯಾಪಿ.