` ರಾಘಣ್ಣ ಪತ್ನಿಯನ್ನು ಅಮ್ಮಾ ಎಂದು ಕರೆಯೋದೇಕೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
why did raghavendra rajkumar call his wife amma
Raghavendra Rajkumar wife Mangala

ಅಮ್ಮನ ಮನೆ ಚಿತ್ರದ ಬಿಡುಗಡೆ ಸಂಭ್ರಮ, ರಾಘವೇಂದ್ರ ರಾಜ್‍ಕುಮಾರ್ ಮುಖದಲ್ಲಿ ಎದ್ದು ಕಾಣ್ತಿದೆ. 14 ವರ್ಷಗಳ ನಂತರ ರಾಘಣ್ಣ ತೆರೆ ಮೇಲೆ ಬರುತ್ತಿದ್ದಾರೆ. ಅದೇ ಅವರಿಗೆ ಖುಷಿ. ಅಮ್ಮನ ಮನೆ ಅನ್ನೋ ಸಿನಿಮಾ, ರಾಘಣ್ಣನ ಎಲ್ಲ ನೋವು ನಲಿವುಗಳನ್ನೂ ನೆನಪಿಸಿದೆ.

ಹೀಗೆ ಎಲ್ಲವನ್ನೂ ನೆನಪಿಸಿಕೊಳ್ಳುವಾಗ ತಮ್ಮ ಪತ್ನಿ ಮಂಗಳಾ ಅವರನ್ನು ತಾವು ಅಮ್ಮಾ ಎಂದೇ ಕರೆಯೋದಾಗಿ ಹೇಳಿಕೊಂಡಿದ್ದಾರೆ. 

ನನಗೆ ತಂದೆ ಆಗಾಗ ಹೇಳ್ತಾ ಇದ್ರು. ಹೆಂಡತಿಯಲ್ಲಿ ಬರೀ ಕಾಮವನ್ನು ಹುಡುಕಬೇಡ. ತಾಯಿಯನ್ನು ಹುಡುಕು. ಸಿಕ್ತಾಳೆ. ಅವರೊಳಗೆ ಇರುವ ತಾಯಿಯನ್ನು ನಾವು ಹೊರಗೆ  ತರಬೇಕು. ಒಮ್ಮೆ ಆ ತಾಯಿ ಹೊರಬಂದುಬಿಟ್ಟರೆ, ನಿನಗೆ ಹೆಂಡತಿ, ತಾಯಿ, ಮಗಳು, ಸೊಸೆ ಎಲ್ಲರೂ ಸಿಕ್ತಾರೆ' ಎನ್ನುತ್ತಿದ್ದರು.

ಅಪ್ಪಾಜಿ ಹೇಳಿದಂತೆಯೇ ಆಯಿತು. ಮಂಗಳಾ ನನಗೆ ತಾಯಿಯಾದಳು ಎನ್ನುವ ರಾಘಣ್ಣ, ಮಂಗಳಾ ಅವರನ್ನು ಇವತ್ತಿಗೂ ಕರೆಯೋದು ಅಮ್ಮಾ ಎಂತಲೇ. ಅಪ್ಪ, ಅಮ್ಮನನ್ನು ಯಾವತ್ತೂ ಹೋಗೇ ಬಾರೇ ಎಂದವರಲ್ಲ. ಸೊಸೆ, ಹೆಣ್ಣು ಮಕ್ಕಳನ್ನೂ ಹೋಗೇ ಬಾರೇ ಎಂದವರಲ್ಲ. ಹೀಗಾಗಿ.. ನನಗೂ ಅದೇ ಅಭ್ಯಾಸವಾಗಿ ಹೋಗಿದೆ ಎಂದು ನೆನಪಿಸಿಕೊಳ್ಳೋ ರಾಘಣ್ಣ, ಅದೆಲ್ಲ ನೆನಪನ್ನೂ ಮರುಕುಳಿಸುವಂತೆ ಮಾಡಿದ ಅಮ್ಮನ ಮನೆ ಸಿನಿಮಾ, ನಿರ್ದೇಶಕ ನಿಖಿಲ್ ಮಂಜು, ನಿರ್ಮಾಪಕರಾದ ಶ್ರೀಲಲಿತಾ ಅವರಿಗೆ ಥ್ಯಾಂಕ್ಸ್ ಹೇಳ್ತಾರೆ.

I Love You Movie Gallery

Rightbanner02_butterfly_inside

Paddehuli Movie Gallery