ಇತ್ತೀಚೆಗೆ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಗಳನ್ನು ಅತಿ ದೊಡ್ಡ ಭೂತವಾಗಿ ಕಾಡ್ತಿರೋದು ಪೈರಸಿ. ಅದರಲ್ಲೂ ತಮಿಳು ರಾಕರ್ಸ್. ಈಗ ಆ ಕಂಟಕ ಕನ್ನಡ ಚಿತ್ರರಂಗಕ್ಕೂ ಎದುರಾಗಿದೆ. ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವನ್ನು ತಮಿಳು ರಾಕರ್ಸ್ ಆನ್‍ಲೈನ್‍ಗೆ ಬಿಟ್ಟಿದ್ದಾರೆ. 25 ದಿನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನಟಸಾರ್ವಭೌಮನಿಗೆ ನಿಜವಾದ ವಿಲನ್ ಆಗಿ ಕಾಡ್ತಿದೆ ತಮಿಳು ರಾಕರ್ಸ್.
ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ಈ ಪೈರಸಿ ದಂಧೆಕೋರರ ವಿರುದ್ಧ ರಾಕ್‍ಲೈನ್ ಸಮರ ಸಾರುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ತಮಿಳು ರಾಕರ್ಸ್ ಸಿಕ್ಕಿಬೀಳ್ತಾರಾ..?