ಸ್ಯಾಂಡಲ್‍ವುಡ್‍ನ ಸರಳ ಸುಂದರಿ ಸುಧಾರಾಣಿ, ಇದುವರೆಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ಸ್‍ಪೆಕ್ಟರ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅವರಿಗೀಗ ಏಕ್‍ದಂ ಪ್ರಮೋಷನ್ ಸಿಕ್ಕಿದೆ. ಅವರೀಗ ಕಮಿಷನರ್. ಪ್ರಮೋಷನ್ ಕೊಟ್ಟಿರುವುದು ಕನ್ನಡ್ ಗೊತ್ತಿಲ್ಲ ಸಿನಿಮಾ ಟೀಂ.
ಹರಿಪ್ರಿಯಾ ನಾಯಕಿಯಾಗಿರುವ ಚಿತ್ರದಲ್ಲಿ ಸುಧಾರಾಣಿ ಕಮಿಷನರ್ ಆಗಿ ನಟಿಸುತ್ತಿದ್ದಾರೆ. ಚಿತ್ರದಲ್ಲೊಂದು ಪಾತ್ರ ಮಾಡುತ್ತಿರುವ ನಟ ಮಯೂರ ರಾಘವೇಂದ್ರ ಚಿತ್ರದ ನಿರ್ದೇಶಕರೂ ಹೌದು. ಸುಧಾರಾಣಿ ಎದುರು ನಟಿಸುವಾಗ ನರ್ವಸ್ ಆಗಿದ್ದೆ ಎನ್ನುವ ಮಯೂರ ಸುಧಾರಾಣಿ, ಹರಿಪ್ರಿಯಾ ಕಾಂಬಿನೇಷನ್ ಚೆನ್ನಾಗಿ ಬಂದಿದೆ ಎಂದು ಹೇಳುವುದನ್ನು ಮರೆಯೋದಿಲ್ಲ.