ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಹೊಸ ಡ್ಯೂಟಿಗೆ ಹಾಜರ್ ಆಗಿದ್ದಾರೆ ಕಿಚ್ಚ ಸುದೀಪ್. ಕೋಟಿಗೊಬ್ಬ 3 ಚಿತ್ರದ 3ನೇ ಹಂತದ ಚಿತ್ರೀಕರಣ ಶುರುವಾಗಿದೆ.
ಪೈಲ್ವಾನ್ ಮುಗಿಸಿದ್ದೇವೆ. ಪೈಲ್ವಾನ್ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಇದೊಂಥರಾ ಮಕ್ಕಳು ಸ್ಕೂಲು ಬದಲಿಸಿದ ಹಾಗೆ. ಸಿನಿಮಾಗಳ ಬ್ಯೂಟಿಯೇ ಇದು. ಹೊಸ ಮುಖಗಳು.. ಹೊಸ ಜಾಗಗಳು.. ಅಫ್‍ಕೋರ್ಸ್.. ಹೊಸ ಹೊಸ ಸವಾಲುಗಳು.
ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಚಿತ್ರಕ್ಕೆ ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಹೊಸ ಹುಡುಗ ಕಾರ್ತಿಕ್ ಈ ಮೆಗಾಪ್ರಾಜೆಕ್ಟ್