` ಕೂಡಲ ಸಂಗಮದೇವ.. ಪಡ್ಡೆಹುಲಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
basavanna's vachana in paddehuli
paddehuli

ಪಡ್ಡೆಹುಲಿ ಚಿತ್ರದಲ್ಲಿ ಭಾವಗೀತೆಗಳಿಗಷ್ಟೇ ಅಲ್ಲ, ಬಸವಣ್ಣನವರ ವಚನಗಳಿಗೂ ಜಾಗ ಸಿಕ್ಕಿದೆ. ಶಿವರಾತ್ರಿ ವಿಶೇಷವಾಗಿ ಪಡ್ಡೆಹುಲಿ ಚಿತ್ರತಂಡ ಚಿತ್ರದಲ್ಲಿ ಬಳಸಿಕೊಂಡಿರುವ ಎರಡು ವಚನಗಳನ್ನು ಬಿಡುಗಡೆ ಮಾಡಿದೆ. ಹೊಸ ಸಂಗೀತ ಸ್ಪರ್ಶದಲ್ಲಿ ಅಣ್ಣನವರ ವಚನಗಳು ಕಿವಿಗಿಂಪಾಗಿವೆ.

ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಚಿತ್ರ ಪಡ್ಡೆಹುಲಿಗೆ ಗುರು ದೇಶಪಾಂಡೆ ನಿರ್ದೇಶಕ. ಮ್ಯೂಸಿಕಲ್ ಲವ್ ಸ್ಟೋರಿಯಾಗಿರುವ ಪಡ್ಡೆಹುಲಿಯಲ್ಲಿ ರವಿಚಂದ್ರನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದು, ನಿಶ್ವಿಕಾ ನಾಯ್ಡು ನಾಯಕಿ.

ಅಜನೀಶ್ ಲೋಕನಾಥ್, ಭಾವಗೀತೆಗಳು ಮತ್ತು ಬಸವಣ್ಣನವರ ವಚನಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದ್ದು, ವಿಭಿನ್ನವಾಗಿ ಕೇಳಿಸುತ್ತಿವೆ. ಕಳಬೇಡ ಕೊಲಬೇಡ.. ಹುಸಿಯ ನುಡಿಯಲು ಬೇಡ.. ಮತ್ತು ಲೋಕದಾ ಡೊಂಕ ನೀವೇಕೆ ತಿದ್ದುವಿರಿ.. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂಬ ಎರಡು ವಚನಗಳನ್ನು ಹೊಸತನದಲ್ಲಿ ಕಟ್ಟಿಕೊಟ್ಟಿದ್ದಾರೆ ಅಜನೀಶ್ ಲೋಕನಾಥ್.

Ayushmanbhava Movie Gallery

Ellidhe Illitanaka Movie Gallery