` ಅಮ್ಮನ ಮನೆ ನೋಡ್ತಾರೆ ಸಿಂಗಾಪುರ್ ಪ್ರಧಾನಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sinhapre cm to watch ammana mane
Ammana Mane

ಅಮ್ಮನ ಮನೆ ಚಿತ್ರ, ಇದೇ ಮಾರ್ಚ್ 8ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದಕ್ಕೂ ಮುನ್ನ ಈ ಸಿನಿಮಾ ಸಿಂಗಾಪುರ್‍ನಲ್ಲಿ ರಿಲೀಸ್ ಆಗುತ್ತಿದೆ. ಅದಕ್ಕೆ ವಿಶೇಷ ಕಾರಣವೂ ಇದೆ. 6 ವರ್ಷಗಳ ಹಿಂದೆ ರಾಘವೇಂದ್ರ ರಾಜ್‍ಕುಮಾರ್, ಸಿಂಗಾಪುರ್‍ಗೆ ಹೋಗಿದ್ದರು. ಸ್ಟ್ರೋಕ್ ಹೊಡೆದು ಹಾಸಿಗೆ ಹಿಡಿದಿದ್ದ ರಾಘಣ್ಣನವರಿಗೆ ಸಿಂಗಾಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗಿ ಹಿಂದಿರುಗಿದ್ದ ರಾಘಣ್ಣ ಈಗ ಸಿನಿಮಾದಲ್ಲಿ ನಟಿಸಿದ್ದಾರೆ.

ಇದು ಸ್ವತಃ ಸಿಂಗಾಪುರ್ ಪ್ರಧಾನಿಯವರಿಗೂ ಅಚ್ಚರಿ ಮೂಡಿಸಿದೆ. ಹೀಗಾಗಿಯೇ ರಿಲೀಸ್ ಆಗುತ್ತಿರುವ ಕನ್ನಡ ಚಿತ್ರವನ್ನು ನೋಡಲು ಬರುತ್ತಿದ್ದಾರಂತೆ ಸಿಂಗಾಪುರ್ ಪ್ರಧಾನಿ. ಒಬ್ಬ ಪೇಷೆಂಟ್ ಹೀರೋ ಆಗಿದ್ದೇ ವಿಸ್ಮಯ ಅಲ್ಲವೇ ಎನ್ನುತ್ತಾರೆ ರಾಘಣ್ಣ.

ನಿಖಿಲ್ ಮಂಜು ಅವರನ್ನಂತೂ ರಾಘಣ್ಣ ದೇವರಿಗೆ ಹೋಲಿಸುತ್ತಾರೆ. ಬಹುಶಃ ಅವರು ಬಲವಂತ ಮಾಡಿ ಈ ಸಿನಿಮಾ ಮಾಡಿಸದೇ ಹೋಗಿದ್ದರೆ, ನಾನು ಚೇತರಿಸಿಕೊಳ್ಳುತ್ತಲೇ ಇರಲಿಲ್ಲವೇನೋ. ನನಗೆ ಸ್ಟ್ರೋಕ್ ಆಗಿದೆ ಎಂಬ ಭಾವನೆಯಲ್ಲಿ ಬದುಕಿ ಯಾವತ್ತೋ ಒಂದು ದಿನ ಸಾಯುತ್ತಿದ್ದೆ. ನನಗೆ ನಿಖಿಲ್ ಮಂಜು ಆತ್ಮವಿಶ್ವಾಸ ತುಂಬಿದರು ಎಂದು ಶ್ಲಾಘಿಸುತ್ತಾರೆ. ಅಮ್ಮನ ಮನೆ ಇದೇ ವಾರ ರಿಲೀಸ್ ಆಗುತ್ತಿದೆ.

Trayambakam Movie Gallery

Rightbanner02_butterfly_inside

Paddehuli Movie Gallery