` ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಿಗೇ ಪ್ರಮೋಷನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep and darshan promote udgarsha
Udgarsha Movie Image

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಕಾಲದ ಆಪ್ತಮಿತ್ರು. ಅಫ್‍ಕೋರ್ಸ್.. ಈಗೇನೂ ದ್ವೇಷಿಗಳಲ್ಲ. ಆದರೆ, ಹಳೆಯ ಬಾಂಧವ್ಯದ ಕೊಂಡಿ ಸ್ವಲ್ಪ ಸಡಿಲವಾಗಿರುವುದು ಗಾಂಧಿನಗರದಲ್ಲಿ ಗುಟ್ಟಾಗೇನೂ ಉಳಿದಿಲ್ಲ. ಈಗ ಇವರಿಬ್ಬರೂ ಒಟ್ಟಿಗೇ ಒಂದೇ ಚಿತ್ರಕ್ಕಾಗಿ ಬರುತ್ತಿದ್ದಾರೆ. 

ಸುದೀಪ್‍ರನ್ನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರ ಉದ್ಘರ್ಷ ಚಿತ್ರಕ್ಕೆ ಸುದೀಪ್ ಕಂಠದಾನ ಮಾಡಿದ್ದಾರೆ. ಇದೇ ವೇಳೆ ಉದ್ಘರ್ಷ ಚಿತ್ರದ ಟ್ರೇಲರ್ ರಿಲೀಸ್ ಮಾಡುತ್ತಿರುವುದು ದರ್ಶನ್. ಕನ್ನಡ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್‍ಗಳು ಈ ರೀತಿಯಲ್ಲಿ ಒಂದಾಗುತ್ತಿದ್ದಾರೆ. ಅವರಿಬ್ಬರೂ ಒಟ್ಟಿಗೇ.. ಒಂದೇ ವೇದಿಕೆಯಲ್ಲಿ.. ಒಂದೇ ಸಿನಿಮಾದಲ್ಲಿ ಹಿಂದಿನಂತೆ ಕಾಣಿಸಿಕೊಳ್ಳಲಿ ಎನ್ನುವುದು ಇಬ್ಬರೂ ನಟರ ಅಭಿಮಾನಿಗಳ ಆಸೆ. 

Adi Lakshmi Purana Movie Gallery

Rightbanner02_butterfly_inside

Dasharatha Movie Gallery