` ಸೀಕ್ವೆಲ್ ಸ್ಟಾರ್ ಶರಣ್ ಗಂಟಲಿಗೆ ಅದೇನಾಯ್ತು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sharan down with throat onfection
Sharan

ಇತ್ತೀಚೆಗೆ ಸೀಕ್ವೆಲ್ ಸ್ಟಾರ್ ಆಗುತ್ತಿರುವ ಶರಣ್ ಗಂಟಲಿಗೆ ಇನ್‍ಫೆಕ್ಷನ್ ಆಗಿದೆ. ಹೀಗಾಗಿಯೇ ಶರಣ್ ಅವರ ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಡಬ್ಬಿಂಗ್‍ಗೆ ಬ್ರೇಕ್ ಬಿದ್ದಿದೆ. ಏಕೋ ಏನೋ ಗೊತ್ತಿಲ್ಲ. ಡಬ್ ಮಾಡುವಾಗ ನನ್ನ ಧ್ವನಿ ನನಗೇ ಕರ್ಕಶ ಎನ್ನಿಸೋಕೆ ಶುರುವಾಯ್ತು. ಹೀಗಾಗಿ ಡಬ್ಬಿಂಗ್‍ಗೆ ನಿಲ್ಲಿಸಿದ್ದೇವೆ ಎಂದಿದ್ದಾರೆ ಶರಣ್.

ಇತ್ತೀಚೆಗೆ ಶರಣ್ ಸೀಕ್ವೆಲ್ ಸ್ಟಾರ್ ಆಗುತ್ತಿದ್ದಾರೆ. ರ್ಯಾಂಬೋ-2, ವಿಕ್ಟರಿ 2 ನಂತರ ಈಗ ಅಧ್ಯಕ್ಷ ಇನ್ ಅಮೆರಿಕ ಶೂಟಿಂಗ್ ಮುಗಿಸಿದ್ದಾರೆ. ಇದು ಅಧ್ಯಕ್ಷ ಚಿತ್ರದ ಸೀಕ್ವೆಲ್. ಇವೆಲ್ಲ ಅವರದ್ದೇ ಚಿತ್ರದ ಸೀಕ್ವೆಲ್ ಆದರೆ, ಮುಂದಿನ ಸಿನಿಮಾ ಯೋಗರಾಜ್ ಭಟ್ಟರ ಗಾಳಿಪಟ 2. ಅದು ಭಟ್ಟರೇ ಮಾಡುತ್ತಿರುವ ಅವರ ಚಿತ್ರದ ಸೀಕ್ವೆಲ್. ಒಟ್ಟಿನಲ್ಲಿ ಶರಣ್ ಈಗ ಸೀಕ್ವೆಲ್ ಸ್ಟಾರ್.