ನಟಸಾರ್ವಭೌಮ ಚಿತ್ರ ಯಶಸ್ವಿಯಾಗಿ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿರೋ ಪುನೀತ್ ರಾಜ್‍ಕುಮಾರ್, ಅಭಿಮಾನಿ ದೇವರುಗಳ ದರ್ಶನ ಯಾತ್ರೆ ಕೈಗೊಂಡಿದ್ದಾರೆ.
ಹಾವೇರಿಯಿಂದ ಶುರುವಾದ ನಟಸಾರ್ವಭೌಮನ ಯಾತ್ರೆ, ರಾಣೆಬೆನ್ನೂರು, ಚಿತ್ರದುರ್ಗ, ಹಾವೇರಿ, ಶಿರಾ, ತುಮಕೂರುಗಳನ್ನೂ ತಲುಪಿದೆ. ಹಾವೇರಿಯಲ್ಲಿ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಟ್ಟಡ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಪುನೀತ್.
ಈಗಾಗಲೇ ಮೈಸೂರು, ಮಂಡ್ಯದಲ್ಲೊಂದು ಸುತ್ತು ಮುಗಿಸಿರುವ ಪುನೀತ್, ಕರಾವಳಿ ಭಾಗದಲ್ಲೂ ಜರ್ನಿ ಮಾಡಿದ್ದಾರೆ.